ಶ್ರೀರಾಮ ಶಿಶುಮಂದಿರಕಲ್ಲಡ್ಕದ ವತಿಯಿಂದ ನವರಾತ್ರಿಯ ವಿಜಯದಶಮಿ ದಿನದಂದು ವೇದವ್ಯಾಸದ್ಯಾನಮಂದಿರದಲ್ಲಿ ವಿದ್ಯಾರಂಭಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಗಣಹೋಮದೊಂದಿಗೆಆರಂಭವಾದಕಾರ್ಯಕ್ರಮದಲ್ಲಿಒಡಿಯೂರುಕ್ಷೇತ್ರದ ಪರಮ ಪೂಜನೀಯ ಶ್ರೀ ಮಾತನಂದಮಯಿ ಸ್ವಾಮಿನಿ ಇವರು ಶ್ರೀರಾಮ ವಿದ್ಯಾಕೇಂದ್ರದಆಶ್ರಯದಲ್ಲಿ ನಡೆಯುವಂತಹ 5 ಶಿಶುಮಂದಿರಗಳ ಒಟ್ಟು73 ಮಕ್ಕಳಿಗೆ ಮಗುವಿನ ಕೈಯಲ್ಲಿ ಅರಶಿನ ಕೊಂಬನ್ನು ಹಿಡಿದು ಹರಿವಾಣದಲ್ಲಿಅಕ್ಕಿಯ ಮೇಲೆ ಅಕ್ಷರಗಳನ್ನು ಬರೆಸುವುದರ ಮೂಲಕ ಅಕ್ಷರಾಬ್ಯಾಸ ಮಾಡಿಸಿ ಶುಭ ಹಾರೈಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿಡಾ|| ಪ್ರಭಾಕರ ಭಟ್, ನಾರಾಯಣ ಸೊಮಾಯಾಜಿ, ವಸಂತ ಮಾಧವ ಶ್ರೀಮಾನ್, ಡಾ|| ಕಮಲಾ ಭಟ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭ||ಜಯಂತಿ ಮಾತಾಜಿ ಸ್ವಾಗತಿಸಿ, ಭ|| ಶಶಿಪ್ರಭಾ ಮಾತಾಜಿ ನಿರೂಪಿಸಿದರು.
