ಉಡುಪಿ :ಸುಸ್ಥಿರ ಪ್ರವಾಸೋದ್ಯಮ ಮತ್ತು ಕಡಲ ಕಿನಾರೆಗಳನ್ನು ಸ್ವಚ್ಛವಾಗಿಡುವ ಸಂಕಲ್ಪದೊಂದಿಗೆ ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ 34ನೇ ವಾರದ ಬೀಟ್ ದ ಪ್ಲಾಸ್ಟಿಕ್ ಪೊಲ್ಯೂಷನ್ ಎಂಬ ಅಭಿಯಾನವು ಅ.12 ಶನಿವಾರ ಮಲ್ಪೆ ಕಡಲ ತೀರದಲ್ಲಿ ನಡೆಯಿತು.
ಕಡಲ ತೀರದಲ್ಲಿ ಹರಡಿಕೊಂಡಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ಹೆಕ್ಕಿ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಸಹಕಾರದಿಂದ ವಿಲೇವಾರಿ ಮಾಡಲಾಯಿತು.ಈ ಸಂದಭ೯ದಲ್ಲಿ ಜಗದೀಶ್ ಶೆಟ್ಟಿ, ಉದಯ್ ನಾಯ್ಕ,ರಾಘವೇಂದ್ರ ಪ್ರಭು, ಕವಾ೯ಲು, ರಕ್ಷಿತ್ ವoಡ್ಸೆ ಮುಂತಾದವರಿದ್ದರು.

