ಪೊಳಲಿ: ರಾಮಕೃಷ್ಣತಪೋವನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ರಾಜರಾಜೇಶ್ವರೀ, ದುರ್ಗಾಪರಮೇಶ್ವರೀ,ಭದ್ರಕಾಳಿ,ಶಾರದಾದೇವಿಯ ಬಾವಚಿತ್ರ ದೇವರ ಪೊಟೋಗಳೊಂದಿಗೆ ನವರಾತ್ರಿಯ ಮೊದಲ ದಿನದಂದು ಮುಂಜಾನೆ 5 ಗಂಟೆಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಾಸ್ಥಾನಕ್ಕೆ ಸುತ್ತು ಬಂದು ರಾಮಕೃಷ್ಣ ತಪೋವನದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. 8vpkumaripooje

*ಕುಮಾರಿ ಪೂಜೆಯಲ್ಲಿ ಬಹಳ ವಿಶೇಷತೆ:

ರಾಮಕೃಷ್ಣ ಆಶ್ರಮದಲ್ಲಿ ಐದು ವರ್ಷದ ಮಕ್ಕಳಿಗೆ ದೇವಿಯಂತೆ ಅಲಂಕರಿಸಿ ಪೂಜೆ ನೆರವೇಇಸುವುದು ಇಲ್ಲಿನ ವಿಶೇಷತೆ ಇದೆ. ನವರಾತ್ರಿಯ 9ದಿನದಲ್ಲಿ 9 ಕುಮಾರಿಯವರು ದೇವಿ ರೂಪದಲ್ಲಿ ಅಲಂಕರಿಸಿ ಸಿದ್ದವಾಗಿ ಮನೆಯವರೊಂದಿಗೆ ಬಂದು ಪೂಜೆಗೆ ರೆಡಿಯಾಗುತ್ತಾರೆ. ಕುಮಾರಿಯವರು ಐದು ವರ್ಷಕ್ಕಿಂತ ಕೆಳಗಿನ ವಯಸ್ಸಿನವರಾಗಿರುತ್ತಾರೆ.8vpkumari pooje

chaythra7

chaythra 10ಕುಮಾರಿ ಪೂಜೆ ನೆರವೇರಿಸಿದ ನವದುರ್ಗೆಯರು ಶರನ್ನವರಾತ್ರಿಯ ಮೊದಲ ದಿನದಿಂದ ಒಂಬತ್ತನೆ ದಿನದವರೆಗೆ ಪೂಜಿಸಲ್ಪಟ್ಟ ಕುಮಾರಿಯವರನ್ನು 10ನೇ ದಿನದಂದು 9 ಕುಮಾರಿಯವರನ್ನು ದೇವಿ ರೂಪದಲ್ಲಿ ಅಲಂಕರಿಸಿ ಒಟ್ಟಿಗೆ ಕುಳ್ಳಿರಿಸಿ 108 ಪಾರಾಯಣ ಮಾಡಿ ಅರ್ಚನೆ , ನೈವೇಧ್ಯ ಮಾಡಿ ಪೂಜೆ ನೆರವೇರಿಸಿ ಫಲಪುಷ್ಪ, ಹಣ್ಣು ಹಂಪಲುಗಳನ್ನು ನೀಡಿ ದುರ್ಗೆಯ ರೂಪದಲ್ಲಿ ಕುಮಾರಿಯವರನ್ನು ಸ್ವಾಮೀಜಿಯವರು ಸಾಕ್ಷಾತ್ ಶಾರದಾ ದೇವಿಯವರನ್ನು ಕಾಣುತ್ತಾರೆ. ಅವರು ಸಾಷ್ಟಾಂಗ ನಮಸ್ಕರಿಸಿ ಆಶೀರ್ವಾದ ಪಡೆದು ನಂತರ ಕುಮಾರಿಯವರಿಗೆ ಅನ್ನದಾನ ಮಾಡಿ ಕುಮಾರಿಯವರಿಗೆ ಉಡುಗೊರೆ ನೀಡಿ ಸಂತೃಪ್ತಿಗೊಳ್ಳುತ್ತಾರೆ?

By Suddi9

Leave a Reply

Your email address will not be published. Required fields are marked *