ಬಂಟ್ವಾಳ :ನರಿಕೊಂಬು ಗ್ರಾಮ ಕೇದಿಗೆ-ಕಲ್ಯಾಣಾಗ್ರಹಾರ 1. 5 ಕಿ.ಮೀ. ಸಂಪರ್ಕ ರಸ್ತೆಗೆ ಸೆ. 26ರಂದು ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ ಗುದ್ದಲಿ ಪೂಜೆ ನೆರವೇರಿಸಿದರು. ನಬಾರ್ಡ್ ಯೋಜನೆಯ ಆರ್‍ಐಡಿಎಫ್ ಯೋಜನೆಯಡಿ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಅವರ ಶಿಫಾರಸಿನಂತೆ ಮಂಜೂರಾದ 80 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಯನ್ನು ಲೊಕೋಪಯೋಗಿ ನಿರ್ವಹಿಸುವುದು.ರಸ್ತೆಯನ್ನು 3. 5 ಮೀಟರ್ ಅಗಲ, 1,550 ಮೀಟರ್ ಉದ್ದಕ್ಕೆ ನಿರ್ಮಾಣ ಮಾಡಲಾಗುತ್ತದೆ. ಇದರಲ್ಲಿ ಮೂರು ಮೋರಿ ಕಾಮಗಾರಿ ನಡೆಯುವುದು. ಸಂಪೂರ್ಣ ಡಾಮಾರೀಕರಣ ಆಗಲಿದೆ.
ಸುದೀರ್ಘ ಅವ„ಯಿಂದ ಇಲ್ಲಿನ ರಸ್ತೆಯು ಡಾಮಾರೀಕರಣ ಇಲ್ಲದೆ ಮಳೆಗಾಲದಲ್ಲಿ ಜನ ಸಾಮಾನ್ಯರಿಗೆ ಸಂಚಾರ ಕಷ್ಟವಾಗಿತ್ತು. ವಾಹನ ಸಂಚಾರವು ಸಮಸ್ಯೆಯಾಗಿತ್ತು. ಕಳೆದ ಚುನಾವಣೆಯ ಸಂದರ್ಭ ಶಾಸಕರು ನೀಡಿದ ಆಶ್ವಾಸನೆಯಂತೆ ರಸ್ತೆ ಕಾಮಗಾರಿಗೆ ಅನುದಾನ ನೀಡಲಾಗಿದೆ. ಶಿಲಾನ್ಯಾಸ ಸಂದರ್ಭದಲ್ಲಿ ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು, ಸದಸ್ಯರಾದ ಕಿಶೋರ್ ಶೆಟ್ಟಿ, ತ್ರಿವೇಣಿ ಕೇದಿಗೆ, ದಿವಾಕರ ಶಂಭೂರು, ಪ್ರಮುಖರಾದ ಪ್ರೇಮನಾಥ ಶೆಟ್ಟಿ, ಜಿನರಾಜ ಕೋಟ್ಯಾನ್, ವಾರ್ಡ್ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ದರ್ಖಾಸ್, ಕಾರ್ಯದರ್ಶಿ ರಾಜೇಶ್ ಹೊಸವೊಕ್ಲು, ಮನೋಜ್ ಕೇದಿಗೆ, ಪ್ರಮೋದ ಕೇದಿಗೆ, ನಾರಾಯಣ ಕೇದಿಗೆ, ಸಂಜೀವ ಸಪಲ್ಯ ಕಲ್ಯಾಣಾಗ್ರಹಾರ, ಪುರುಷೋತ್ತಮ ಟೈಲರ್, ಅಣ್ಣಿ ಪೂಜಾರಿ, ಚಂದು ಪೂಜಾರಿ, ಸುರೇಶ ಕೋಟ್ಯಾನ್, ಪ್ರಶಾಂತ ನಾಟಿ, ನಾಟಿ ಪುರುಷೋತ್ತಮ ಬಂಗೇರ, ನಿತೇಶ್ ನಾಟಿ, ದಯಾನಂದ ನೆಲ್ಯಡ್ಕ, ಕೋಡಿಮಜಲು ಪ್ರಕಾಶ್, ಲೊಕೋಪಯೋಗಿ ಇಲಾಖೆ ಎಇಇ ಷಣ್ಮುಗಂ , ಸಹಾಯಕ ಇಂಜಿನಿಯರ್ ರವೀಂದ್ರನಾಥ ಶೆಟ್ಟಿ ಉಪಸ್ಥಿತರಿದ್ದರು.ಪುರೋಹಿತ ಕೇಶವ ಶಾಂತಿ ವೈದಿಕ ವಿ„ ಪೂಜೆಯನ್ನು ನೆರವೇರಿಸಿದರು.
