ಗುರುಪುರ ಕೈಕಂಬದ ಪೊಳಲಿ ದ್ವಾರದ ಬಳಿ ಅಳವಡಿಸಲಾದ ರಸ್ತೆ ಸುರಕ್ಷತಾ ಫಲಕವನ್ನು ಬಜಪೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಆರ್.ನಾೈಕ್ ಅನಾವರಣಗೊಳಿಸಿದರು. ಮಂಗಳೂರು ಇಂಟರ್‍ನ್ಯಾಷನಲ್ ಟೂರ್ಸ್ ಎಂಡ್ ಟ್ರಾವಲ್ಸ್ ಸಂಸ್ಥೆಯು ರಸ್ತೆ ಸುರಕ್ಷತಾ ಫಲಕಗಳನ್ನು ಅಳವಡಿಸಲಾಗುವುದು ಎಂದು ಸಂಸ್ಥೆಯ ಮೂಲಕ ಎನ್.ಅಬೂಬಕ್ಕರ್ ಅಡ್ಡೂರು ಈ ವೇಳೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹಿಂ, ಗುರುಪುರ ಪಂಚಾಯತ್ ಸದಸ್ಯ ಸಾದಿಕ್ ಅಡ್ಡೂರು, ಪತ್ರಕರ್ತ ಅಶ್ರಫ್ ಕಮ್ಮಾಜೆ, ಸಾಮಾಜಿಕ ಕಾರ್ಯಕರ್ತ ಅಶ್ರಫ್ ಅಡ್ಡೂರು ಮುಂತಾದವರು ಹಾಜರಿದ್ದರು.
