ಮಂಗಳೂರು : ಪ್ರಮಾಣಪತ್ರ ವಿತರಣೆ ರಾಮಕೃಷ್ಣ ಮಿಷನ್ ಮಂಗಳೂರು ಇದರ ‘ಸ್ವಚ್ಛ ಮನಸ್ಸು 2019’ ರ ವಿದ್ಯಾರ್ಥಿ ವೃಂದಕ್ಕೆ ನಡೆಸಲಾದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಎಸ್.ವಿ.ಎಸ್ ಕಾಲೇಜಿನ ಕಂಪ್ಯೂಟರ್ ಶಿಕ್ಷಕಿ ಸ್ವಚ್ಛತಾಸೇವಾ ಕಾರ್ಯಕರ್ತೆಯಾದ ಹರ್ಷಿತಾರವರು ಪ್ರಮಾಣಪತ್ರವನ್ನು ಹಾಗೂ ‘ಸ್ವಚ್ಛತಾ ಮಂಥನ’ ಪುಸ್ತಕ ವಿತರಣೆಯನ್ನು ಮಾಡಿದರು. ಮುಖ್ಯ ಶಿಕ್ಷಕಿ ವಸಂತಿಕುಮಾರಿ, ಸ್ವಚ್ಛತಾ ಸಂಯೋಜಕ ಶಿಕ್ಷಕರಾದ ಜಿನ್ನಪ್ಪ ಏಳ್ತಿಮಾರ್ ಉಪಸ್ಥಿತರಿದ್ದರು.


