ಬಂಟ್ವಾಳ : ಕಳೆದ ಕೆಲವು ತಿಂಗಳುಗಳಿಂದ ಫರಂಗಿಪೇಟೆ ವ್ಯಾಪ್ತಿಯಲ್ಲಿ ಬೆಳಗ್ಗಿನ ಸಮಯ ಸುಮಾರು 7:30 ರಿಂದ 9:00 ಗಂಟೆಯ ಅವಧಿಯಲ್ಲಿ ಶಾಲಾ ವಿಧ್ಯಾರ್ಥಿಗಳಿಗೆ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಇದ್ದರೂ ನಿಲ್ಲದೆ, ನಿಲ್ಲುವ ಬಸ್ಸುಗಳಲ್ಲಿ ಸ್ಥಳಾವಕಾಶ ವಿಲ್ಲದೆ ಪ್ರಯಾಣಿಸಲು ಸಾಧ್ಯ ವಾಗುತ್ತಿಲ್ಲ . ಪುದು , ಅರ್ಕುಳ ಕೊಡ್ಮಾಣ್ , ಮೇರಮಜಲು , ಇನೋಳಿ ಗ್ರಾಮ ಗಳಿಂದ ವಿದ್ಯಾರ್ಥಿ ಗಳು ಫರಂಗಿಪೇಟೆ ಬಸ್ ಸ್ಟ್ಯಾಂಡಿನಲ್ಲಿ ಬಸ್ಸಿಗಾಗಿ 9:00 ಗಂಟೆ ವರೆಗೂ ಕಾದು ಪ್ರಯಾಣಿಸಲಾಗದೆ ತಮ್ಮ ಬೆಳಗ್ಗಿನ ತರಗತಿಗಳಿಗೆ ಹಾಜರಾಗಲು ವಿಫಲರಾಗುತ್ತಿದ್ದಾರೆ .
ವಿದ್ಯಾರ್ಥಿಗಳಗೆ ಫರಂಗಿಪೇಟೆ ವರೆಗೆ ಪ್ರತ್ಯೇಕ ಬಸ್ಸು ಒದಗಿಸಿ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆ ಯಾಗದಂತೆ ಸಹಕರಿಸಬೇಕೆಂದು ಫರಂಗಿಪೇಟೆ ಯಿಂದ ಪ್ರಯಾಣಿಸುವ ಮಂಗಳೂರಿನ ವಿವಿಧ ಕಾಲೇಜು ವಿದ್ಯಾರ್ಥಿ , ವಿದ್ಯಾರ್ಥಿನಿಯರು ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗ ವಿಭಾಗೀಯ ನಿಯಂತ್ರಾಣಾದಿಕಾರಿ ಯವರಿಗೆ ಮನವಿ ನೀಡಿದರು . ಮನವಿ ನೀಡಿ ಮಾತನಾಡಿದ ತ್ರಿಷಾ ಶೆಟ್ಟಿ ಯವರು ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆ ಹರಿಯದಿದ್ದರೆ ಎಲ್ಲಾ ವಿದ್ಯಾರ್ಥಿ ಗಳನ್ನು ಸೇರಿಸಿಕೊಂಡು ಕೆ ಎಸ್ ಆರ್ ಟಿ ಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು . ಮನವಿ ಸ್ವೀಕರಿಸಿದ ವಿಭಾಗೀಯ ನಿಯಂತ್ರಾಣಾದಿಕಾರಿ ಅರುಣ್ ರವರು ಈಗಿರುವ ಬಸ್ಸುಗಳಲ್ಲೇ ಪುತ್ತೂರು ವಿಭಾಗ ಹಾಗು ಮಡಿಕೇರಿ ವಿಭಾಗದಿಂದ ಬರುವ ಬಸ್ಸು ಗಳನ್ನ ಫರಂಗಿಪೇಟೆಯಲ್ಲಿ ನಿಲುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ಅನುಕೂಲ ಮಾಡಲಾಗುವುದು , ಆದಾಗ್ಯೂ ಸಮಸ್ಯೆ ಪರಿಹಾರ ವಾಗದಿದ್ದಲ್ಲಿ ಪ್ರತ್ಯೇಕ ಬಸ್ ಒದಗಿಸುವ ಭರವಸೆ ನೀಡಿದರು

