ಬಂಟ್ವಾಳ : ಇಲ್ಲಿನ ಶ್ರೀ ವೆಂಕಟರಮಣ ಸ್ವಾವಿೂ ಪದವಿ ಕಾಲೇಜು ಬಂಟ್ವಾಳದಲ್ಲಿ ಇತ್ತೀಚೆಗೆ ಬಂಟ್ವಾಳ ತಾಲೋಕು ಮಟ್ಟದ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಇಂಗ್ಲೀಷ್/ಹಿಂದಿ ಭಾಷೆಯಲ್ಲಿ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. “ಸಬಕಾ ಸಾಥ್ ಸಬಕಾ ವಿಕಾಸ್ ಹಾಗೂ ಸಬಕಾ ವಿಶ್ವಾಸದೊಡನೆ ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣ” ಎಂಬ ವಿಷಯದ ಬಗೆಗಿನ ಈ ಸ್ಪರ್ಧೆಯಲ್ಲಿ ಬಂಟ್ವಾಳ ತಾಲೂಕಿನ ಹಲವು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯನ್ನು ಭಾರತ ಸರಕಾರದ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಧೀನಕ್ಕೆ ಒಳಪಟ್ಟ ನೆಹರು ಯುವಕೇಂದ್ರ ಮಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಶ್ರೀ ವೆಂಕಟರಮಣ ಸ್ವಾವಿೂ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಡೆಸಲಾಗಿತ್ತು.
ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರ ಮಂಗಳೂರು ಇಲ್ಲಿನ ಜಿಲ್ಲಾ ಸಂಯೋಜಜಕರಾದ ಶ್ರೀ ರಘುವೀರ್ ಇವರು ಮಾತನಾಡುತ್ತ “ಯುವ ಜನಾಂಗವು ಭಾರತೀಯ ಸಂಸ್ಕ್ರತಿಯ ವೈಶಿಷ್ಟ್ಯವಾದ ಅನೇಕತೆಯಲ್ಲಿ ಏಕತೆ”ಯನ್ನು ಬೆಳೆಸಿಕೊಂಡು ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆಯಿತ್ತರು. ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಇವರು ಇಂದಿನ ಯುವ ಪೀಳಿಗೆಯು ರಾಷ್ಟ್ರಪ್ರೇಮವನ್ನು ಬೆಳೆಸಿಕೊಂಡು ದೇಶದ ಉನ್ನತಿಯಲ್ಲಿ ಕೈ ಜೋಡಿಸುವುದರ ಜೊತೆಗೆ ಸುದೃಢ ಮತ್ತು ಬಲಿಷ್ಠ ಭಾರತದ ನಿರ್ಮಾಣ ಕಾರ್ಯದಲ್ಲಿ ಸಹಕರಿಸಬೇಕೆಂದು ಸಲಹೆಯಿತ್ತರು. ನೆಹರು ಯುವ ಕೇಂದ್ರದ ತಾಲೋಕು ಸಂಯೋಜಕರಾದ ಶ್ರೀಯುತ ಪ್ರಜ್ವಲ್, ವಿಕಾಸ್ ಹಾಗೂ ಚಿಂತನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಡಾ| ಮಂಜುನಾಥ ಉಡುಪ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿದರೆ, ನೆಹರು ಯುವಕೇಂದ್ರದ ತಾಲೋಕು ಸಂಯೋಜಕರಾದ ಕು| ಚಿಂತನಾ ವಂದಿಸಿದರು. ಸ್ವಯಂ ಸೇವಕ ಶ್ರೀ ಭರತ್ ಪ್ರಾರ್ಥಿಸಿ, ಸ್ವಯಂ ಸೇವಕ ಶ್ರೀ ಕಾರ್ತಿಕ್ ಕಾರ್ಯಕ್ರಮ ನಿರ್ವಹಿಸಿದರು. ಭಾಷಣ ಸ್ಪರ್ಧೆಯಲ್ಲಿ ಎಸ್.ವಿ.ಎಸ್ ಕಾಲೇಜಿನ ವಿದ್ಯಾರ್ಥಿನಿಯರಾದ ಜಾಯ್ಲಿನ್ ಲವಿಟಾ ಫೆಲೆರಾ ಮತ್ತು ರಿಚಾ ಶಿಫಾಲಿ ಡಿಸೋಜ ಇವರು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ಪಡೆದರೆ ಅನುಗ್ರಹ ಮಹಿಳಾ ಕಾಲೇಜು ಕಲ್ಲಡ್ಕದ ವಿದ್ಯಾರ್ಥಿನಿ ಫಾತಿಮಾ ತೌಸೀನಾ ತೃತೀಯ ಸ್ಥಾನವನ್ನು ತನ್ನದಾಗಿರಿಸಿಕೊಳ್ಳುವುದರ ಮೂಲಕ
ಸಪ್ಟಂಬರ್ 21ರ ಶನಿವಾರದಂದು ವಿಶ್ವವಿದ್ಯಾಲಯ ಕಾಲೇಜು ಮಂಗಳೂರಿನಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಗೆ ಆಯ್ಕೆಗೊಂಡರು. ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಎಸ್.ವಿ ಎಸ್ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥರಾದ ಶಾಂತಿ ರೋಚ್, ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ| ಮಂಜುನಾಥ ಊಡುಪ ಮತ್ತು ಶ್ರೀ ರಾಮ ಕಾಲೇಜು ಕಲ್ಲಡ್ಕದ ಆಂಗ್ಲ ವಿಭಾಗದ ಮುಖ್ಯಸ್ಥರಾದ ಶ್ರೀದೇವಿ ಸಹಕರಿಸಿದರು.

