ಬಂಟ್ವಾಳ : ಕಲ್ಲಡ್ಕ ಶಾಖಾ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಇಲ್ಲಿನ ದ.ಕ.ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪರಿಸರದಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು. ಈ ನಿಟ್ಟಿನಲ್ಲಿ ಶಾಲಾ ವತಿಯಿಂದ ಶಾಲಾ ಮುಖ್ಯ ಶಿಕ್ಷಕ ಅಶ್ರಫ್ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು. 

ಇದೇ ವೇಳೆ ಶಾಲೆಯ ತ್ಯಾಜ್ಯ ಸಂಗ್ರಹಣೆಗಾಗಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಎರಡು ಬಕೆಟ್ ಗಳನ್ನು ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಸಂಘದ ಗೌರವಾದ್ಯಕ್ಷ ಹಾಜಿ ಜಿ. ಅಹಮದ್ ಯೂಸುಫ್ ಗೋಳ್ತಮಜಲು, ಅದ್ಯಕ್ಷ ಇಕ್ಬಾಲ್ ಸಿ.ಎಂ, , ಕಾರ್ಯದರ್ಶಿ ಹಾಫಿಲ್ ಎಂ.ಎಸ್, ಕೋಶಾಧಿಕಾರಿ ನಿಹಾನ್ ಮುಹಮ್ಮದ್, ಸ್ವದಖತುಲ್ಲಾ ಫೈಝಿ, ಕಾಸಿಂ ಕಲ್ಲಡ್ಕ, ಸಮದ್ ಮದಕ, ಶಾಲಾ ಸಹ ಶಿಕ್ಷಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.