ಕೈಕಂಬ : ಗುರುಪುರದ ಶ್ರೀಕೃಷ್ಣ ಮಿತ್ರ ಮಂಡಳಿ ಇದರ ವತಿಯಿಂದ ಶ್ರೀಕೃಷ್ಣಾಷ್ಟಮಿ ಪ್ರಯುಕ್ತ 51ನೇ ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಆ. 24ರಂದು ಗುರುಪುರ ಜಂಗಮ ಮಠದ ವಠಾರದಲ್ಲಿ ಜರುಗಲಿದೆ.
ಬೆಳಿಗ್ಗೆ 12:30ಕ್ಕೆ ಸಾರ್ವಜನಿಕರಿಂದ ಅಡಕೆ ಮರ ಹತ್ತುವ ಸ್ಪರ್ಧೆ, ಮಧ್ಯಾಹ್ನ 2:30ರಿಂದ ಮುದ್ದು ಕೃಷ್ಣ ಸ್ಪರ್ಧೆ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಹಾಗೂ ಸಂಜೆ 6ಕ್ಕೆ ವರ್ಣರಂಜಿತ ಮೊಸರುಕುಡಿಕೆ ಉತ್ಸವ ಮೆರವಣಿಗೆ ನಡೆಯಲಿದೆ.
ಸಂಜೆ 4:45ಕ್ಕೆ ಸಭಾ ಕಾರ್ಯಕ್ರಮ. ಜಂಗಮ ಮಠದ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ದುರ್ಗಾವಾಹಿನಿ ಪ್ರಾಂತ ಸಂಯೋಜಕಿ(ಕರ್ನಾಟಕ ದಕ್ಷಿಣ ಪ್ರಾಂತ) ವಿದ್ಯಾ ಮಲ್ಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಭುಜಂಗ ಕುಲಾಲ್(ಬಜರಂಗ ದಳ), ಹರಿಪ್ರಸಾದ್ ಶೆಟ್ಟಿ(ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ), ರಾಜೇಶ್ ಸುವರ್ಣ, ಸದಾನಂದ ಗಾಂಭೀರ್, ಮಹಾಬಲ ಅಮೀನ್, ಸೋಮಯ್ಯ ಬೆಳ್ಳೂರು, ಸುಧೀರ್ ಕಾಮತ್, ಪ್ರಶಾಂತ ಮುಂಡ, ಲಕ್ಷ್ಮಣ್ ಶೆಟ್ಟಿಗಾರ್ ಗುರುಪುರ ಹಾಗೂ ರಾಜೇಶ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.
