ಕೈಕಂಬ:ಸಮಾಜದ ಅಭಿವೃದ್ಧಿಗಾಗಿ ಪ್ರತಿಯೊಬ್ಬ ಸಮಾಜ ಬಾಂಧವರೂ ಶ್ರಮಿಸಬೇಕು ಎಂದು ಮುಂಡಾಲ ಸಮಾಜ (ರಿ) ದ ಅಧ್ಯಕ್ಷರಾದ ನವೀನ್ ಪದಕಣ್ಣಾಯರವರು ಹೇಳಿದರು. ಅವರು ಆ.11 ಗುರುಪುರ ಕೈಕಂಬದ ಡಾ! ಬಿ.ಆರ್.ಅಂಬೇಡ್ಕರ್ ಸಮಾಜ ಮಂದಿರದಲ್ಲಿ ನಡೆದ ಆಟ – ಊಟ – ಕೂಟದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.
ಮುಂಡಾಲ ಸಮಾಜ ಸಂಘಟನೆಯ ಜೊತೆಗೆ ಉನ್ನತ ವಿದ್ಯಾಭ್ಯಾಸವನ್ನು ಕೂಡ ಪಡೆಯಬೇಕು ಎಂದರು. ಗೌರವಾಧ್ಯಕ್ಷರಾದ ಮೋನಪ್ಪ ಗುರಿಕಾರರವರು ಮಾತನಾಡುತ್ತಾ, ಸಮಾಜ ಬಾಂಧವರು ಶೈಕ್ಷಣಿಕವಾಗಿ ಬೆಳೆದರೆ ಮಾತ್ರಾ ಸರ್ವ ರಂಗಗಳಲ್ಲೂ ಬೆಳೆಯಲು ಸಾಧ್ಯ ಎಂದರು. ಸಮಾಜದ ಸಂಘಟನೆಯಲ್ಲಿ ಯುವಜನರ ಪಾತ್ರದ ಬಗ್ಗೆ ಉಡುಪಿ ಅಂಬಲಪಾಡಿಯ ಸಂದೀಪ್ ಕೆ. ರವರು ಮಾತನಾಡಿದರು.
ಈ ಸಂಧರ್ಭದಲ್ಲಿ ನಡೆದ ಕ್ರೀಡೆಯ ಬಹುಮಾನ ವಿತರಣೆಯನ್ನು ವಿಠ್ಠಲ ಆಳ್ವರವರು ನೆರವೇರಿಸಿದರು.ವೇದಿಕೆಯಲ್ಲಿ ಸೋಮಯ್ಯ ಬೆಳ್ಳೂರು, ಆನಂದ ಕಾಜಿಲ, ಸೀತಾರಾಮ ಎಚ್.ಬಿ, ಜಯಂತ ಮಾಸ್ಟರ್, ಹೊನ್ನಯ್ಯ ಬಡಕರೆರವರು ಉಪಸ್ಥಿತರಿದ್ದರು.
ದೇವುಕುಮಾರ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು.ಅಕ್ಷತಾ ಪ್ರಾರ್ಥಿಸಿದರು. ಶಿವಕಿರಣ್ ಸ್ವಾಗತಿಸಿದರು.ಜಯಂತ್ ಕೊಳಂಬೆರವರು ಧನ್ಯವಾದಗಳನ್ನು ಅರ್ಪಿಸಿದರು.ಭರತ್ ಎಸ್.ಕರ್ಕೇರರವರು ಕಾರ್ಯಕ್ರಮ ನಿರೂಪಿಸಿದರು.
