ಬಂಟ್ವಾಳ:   ಒಂದೆಡೆ ನೇತ್ರಾವತಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದರೆ,ಇತ್ತ ಕೆಲ ಹದಿಹರೆಯದ ಯುವಕರು ಪೊಲೀಸ್ ಸಿಬಂದಿಗಳ ಸಮ್ಮುಖದಲ್ಲಿಯೇ ಪಾಣೆಮಂಗಳೂರಿನ ಹಳೇ ಉಕ್ಕಿನ ಸೇತುವೆಯ ಮೇಲಿನಿಂದ ಸಾರ್ವಜನಿಕವಾಗಿ ಭಯಹುಟ್ಟಿಸುವ ರೀತಿಯಲ್ಲಿ ನದಿ ನೀರಿಗೆ ಧುಮುಕುವ ಹುಚ್ಚು ಸಾಹಸ  ನಡೆಸುತ್ತಿದ್ದ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿತು.

2ಬ್ರಿಟಿಷ್ ಕಾಲದ ಪಾಣೆಮಂಗಳೂರಿನ ಹಳೇ ಸೇತುವೆಯ ಮೇಲೆ ನಿಂತು ನೇರವಾಗಿ ಅಪಾಯದಮಟ್ಟವನ್ನು ಮೀರಿ ಹರಿಯುವ  ನೇತ್ರಾವತಿ ನದಿ ನೀರಿಗೆ ಯುವಕರು ಧುಮುಕಿ ಈಜಾಡುವ, ನೀರಾಟ ಆಡುವ ಮೂಲಕ ಸಾಹಸ ಪ್ರದರ್ಶನದಲ್ಲಿ ತೊಡಗಿದ್ದ ದೃಶ್ಯ ಕಂಡು ಬಂದಿದೆ. ಸ್ಥಳೀಯ  ಯುವಕರು ನುರಿತ ಈಜು ಪಟುಗಳಾಗಿದ್ದರೂ, ಸಾರ್ವಜನಿಕರ,ಪೊಲೀಸರ ಸಮ್ಮುಖದಲ್ಲೇ  ಈ ರೀತಿ ಸೇತುವೆ ಮೇಲಿಂದ ನೀರಿಗೆ ಧುಮುಕುವ ಈ ಯುವಕರ ಮೋಜಿನಾಟ,ಸಾಹಸದಾಟ ಸಾರ್ವಜನಿಕರ ಎದೆಯನ್ನೇ ನಡುಗಿಸಿದ್ದು, ವ್ಯಾಪಕ ಚರ್ಚೆಗೂ ಕಾರಣವಾಗಿದೆ.

9ಇದೊಂದು ಕಾನೂನುಬಾಹಿರವಾಗಿದ್ದರು ಕೂಡ    ಪೊಲೀಸರು ಮಾತ್ರ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದು  ಟೀಕೆಗೆ ಕಾರಣವಾಗಿದೆ.  ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿರುವ ಸಂದರ್ಭ ಇಂತಹ ಹುಚ್ಚು ಸಾಹಸ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಅಗಿದೆ.ಯುವಕರ ಈ ಹುಚ್ಚಾಟ ನೋಡಲು ಸಾರ್ವಜನಿಕರು
ಸೇತುವೆಯ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸಿದ ಪರಿಣಾಮ ಸೇತುವೆಯ ಮೇಲಿಂದ ಸಂಚರಿಸುವ ಇತರ ವಾಹನಗಳ ಸಂಚಾರಕ್ಕು ತೊಡಕುಂಟಾಯಿತು. ಈ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕಾಗಮಿಸಿದರೂ ಸಾರ್ವಜನಿಕವಾಗಿ ಭಯ ಹುಟ್ಟಿಿ ಸುವಂತೆ  ನೀರಿಗೆ ಧುಮುಕುವ   ಯುವಕರ ಮೇಲೆ  ಕ್ರಮಕ್ಕೆ  ಮುಂದಾಗದೆ,ಅವರ ಹುಚ್ಚಾಟವನ್ನು ನೋಡುತ್ತಾ ಪೊಲೀಸರು ಮಜಾ ತೆಗೆದು ಕೊಂಡರು.

10       ಕಳೆದವರ್ಷ ಕೂಡ ಧುಮುಕಿದ್ದರು;   ಕಳೆದ ವರ್ಷವು ಆಗಸ್ಟ್ ತಿಂಗಳಲ್ಲಿ ನೇತ್ರಾವತಿ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದರೆ,ಇದೇ ಪಾಣೆಮಂಗಳೂರು ಹಳೇ ಸೇತುವೆಯ ಮೇಲಿಂದ ಯುವಕರ ತಂಡ ನದಿಗೆ ಧುಮುಕುತ್ತಿದ್ದರು.ಈ ಬಗ್ಗೆ ಎಲ್ಲಾ ಮಾಧ್ಯಮಗಳು ಸಚಿತ್ರ ಸುದ್ದಿ ಪ್ರಕಟಿಸಿತ್ತು.ಆಗಲು ತಾಲೂಕಾಡಳಿತವಾಗಲಿ,ಪೊಲೀಸ್ ಇಲಾಖೆಯಾಗಲಿ ಸಾರ್ವಜನಿಕವಾಗಿ ಭಯಹುಟ್ಟಿಸುವ ಈ ರೀತಿಯ ಕಾನೂನು ಬಾಹಿರವಾಗಿ ನೀರಿಗೆ ಧುಮುಕುವ ಯುವಕರ ವಿರುದ್ದ ಯಾವುದೇ ಕ್ರಮಕೈಗೊಳ್ಳದ ಹಿನ್ನಲೆಯಲ್ಲಿ ಈ ಬಾರಿ ಮತ್ತೆ ಯುವಕರು ಇಂತಹ ಹುಚ್ಚು ಸಾಹಸಕ್ಕೆ ಮುಂದಾಗಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.

 

By Suddi9

Leave a Reply

Your email address will not be published. Required fields are marked *