ಶ್ರೀನಿವಾಸಪುರ: ಕೃಷಿ ಉತ್ಪನ್ನ ಮಾರುಕಟ್ಟೆಯ ಅವ್ಯವಸ್ಥೆಯನ್ನು ಅಧಿಕಾರಿಗಳು ಮತ್ತು ಅದ್ಯಕ್ಷರಿಗೆ ದರ್ಶನ ಮಾಡಿಸಿ, ನಗರದಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಕೂಡಲೇ ಕೃಷಿ ಉತ್ಪನ್ನ ಮಾರುಕಟ್ಟೆಗೆ ವರ್ಗಾವಣೆ ಮಾಡಬೇಕು. ಕುಡಿಯುವ ನೀರಿನ ಘಟಕದಬಳಿ ಬಂದು ನೀರಿನ ಘಟಕದ ರೀಪೇರಿಗೆ 1.5 ಲಕ್ಷ ಖರ್ಚು ಮಾಡಲಾಗಿದೆಂದು ಆರೋಪ ಪ್ರತ್ಯಾರೋಪ ಮಾಡಿಕೊಂಡರು ಹಾಗೂ ಇಲಾಖೆಯಲ್ಲಿನ ಬ್ರಹ್ಮಾಂಡ ಭ್ರಷ್ಟಚಾರವನ್ನು ಸಿ.ಬಿ.ಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ, ರೈತ ಸಂಘದಿಂದ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಂದೆ ಹೋರಾಟ ಮಾಡಿ ಸಹಾಯಕ ಕಾರ್ಯದರ್ಶಿ ಕೃಷ್ಣಪ್ಪನವರ ಮುಖಾಂತರ ನಿರ್ಧೇಶಕರಿಗೆ ಮನವಿ ನೀಡಿ ಅಗ್ರಹಿಸಲಾಯಿತು. Raitha sangha s.pur APMC horata news 07-08-2019 (16)

ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾರುಕಟ್ಟೆಯ ಅವ್ಯವಸ್ಥೆಯಾದ ಕುಡಿಯುವ ನೀರು, ಕೊಳೆತ ಟಮೋಟೋ ಅವ್ಯವಸ್ಥೆಗಳ ಅಧಿಕಾರೀಗಳಿಗೆ ಮತ್ತು ಅದ್ಯಕ್ಷರಿಗೆ ದರ್ಶನ ಮಾಡಿಸಿ ತರಾಟೆಗೆ ತೆಗೆದುಕೊಂಡರು .ಮತ್ತು ರೈತರ ಜೀವನಾಡಿಯಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಇಂದು ಕೋಟಿ ಕೋಟಿ ಹಗರಣಗಳ ಮಾರುಕಟ್ಟೆಯಾಗಿದೆ. ಒಂದು ಕಡೆ ಮಾವಿನ ಮಡಿಲು ಎಂದು ಪ್ರಸಿದ್ದಿಯಾಗಿರುವ ಶ್ರೀನಿವಾಸಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸರ್ಕಾರಕ್ಕೆ ಬರುವ ಆದಾಯದ ಜೊತೆಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ನಕಲಿ ಬಿಲ್‍ಗಳನ್ನು ಸೃಷ್ಠಿ ಮಾಡಿ ಕೋಟಿ ಕೋಟಿ ತಿನ್ನುವ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳಿಗೆ ಕಡಿವಾಣ ಇಲ್ಲದಂತಾಗಿದೆ.Raitha sangha s.pur APMC horata news 07-08-2019 (4)

ಒಂದು ಕಡೆ ಸಿಬ್ಬಂದಿ ಕೊರತೆ ಮತ್ತೊಂದು ಕಡೆ ಅಧಿಕಾರಿಗಳ ಬೇಜವಬ್ದಾರಿಯಿಂದ ಮಾರುಕಟ್ಟೆ ಅಭಿವೃದ್ದಿ ಕಾಣದ ಸ್ಮಶಾನವಾಗಿದೆ. ರಾಜ್ಯದಲ್ಲಿ ಉತ್ತಮ ರಾಜಕೀಯ ಹೆಸರು ಪಡೆದಿರುವ ಹಾಗೂ ನೇರ ನಿಷ್ಠೂರವಾಧಿಯಾದ ಕೆ.ಆರ್ ರಮೇಶ್‍ಕುಮಾರ್‍ರವರ ಸ್ವ ಕ್ಷೇತ್ರದ ಮಾರುಕಟ್ಟೆಯ ಹಗಲು ದರೋಡೆಗೆ ಕಡಿವಾಣವಿಲ್ಲದೆ ಜನಸಾಮಾನ್ಯರು ಸಾರ್ವಜನಿಕವಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಹಿಂದೆ ಇದ್ದ ಕಾರ್ಯದರ್ಶಿ ಸಂಜೀವ್‍ರವರು ಕೋಟ್ಯಾಂತರ ಹಣ ದುರುಪಯೋಗ ಪಡಿಸಿಕೊಂಡು ಅವರ ಮೇಲೆ ಕೇಸು ದಾಖಲಾಗಿ ಅಮಾನತ್ತಾಗಿದ್ದಾರೆ.Raitha sangha s.pur APMC horata news 07-08-2019 (15)

ಆದರೆ ಇಷ್ಟಾದರೂ ಮತ್ತೆ ಅದೇ ಚಾಳಿಯನ್ನು ಈಗಿರುವ ಅದ್ಯಕ್ಷರು ಆಡಳಿತ ಮಂಡಳಿಯನ್ನು ಕೈಗೊಂಬೆಯಾಗಿ ಮಾಡಿಕೊಂಡು ನೀರು ಸರಬರಾಜು ಮಾಡುವ ಟ್ಯಾಂಕರ್ ಮಾಪೀಯಾ, ಸ್ವಚ್ಚತೆ ಮಾಡದೆ ಲಕ್ಷಾ ಲಕ್ಷಾ ಜೆ.ಸಿ.ಬಿ ಟ್ರಾಕ್ಟರ್‍ಗಳಿಗೆ ನಕಲಿ ಬಿಲ್ ಮತ್ತು ವಿದ್ಯುತ್ ಸಲಕರಣೆಗಳ ಖರೀದಿ ಹಾಗೂ ಬೋರ್‍ವೆಲ್‍ಗಳ ರೀಪೇರಿ ನೆಪದಲ್ಲಿ ನಕಲಿ ಬಿಲ್‍ಗಳನ್ನು ಸೃಷ್ಠಿ ಮಾಡಿ ಲಕ್ಷಾಂತರ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಜೊತೆಗೆ ಐದು ಜನ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡದೇ ಅವರ ಹೆಸರಿನಲ್ಲಿ ನಕಲಿ ಬಿಲ್‍ಗಳನ್ನು ಸೃಷ್ಠಿ ಮಾಡಿ ಸಂಬಳವನ್ನು ಪಡೆದಿರುವುದು ಅಧಿಕಾರಿಗಳಿಗೆ ಗೊತ್ತಿದ್ದರೂ ದ್ವನಿಯೆತ್ತದೆ ಮೌನವಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಾದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಮಾರುಕಟ್ಟೆಯ ಆಡಳಿತ ಮಂಡಳಿ ಹದಗೆಡಲು ಪ್ರಮುಖ ಕಾರಣ ಎಸ್.ಡಿ.ಎ ನೌಕರನಾಗಿದ್ದ ಜಗನ್ನಾಥ್‍ರವರನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿದ್ದರೂ ಹಣ ಬಲ ಹಾಗೂ ರಾಜಕೀಯ ಬಲದಿಂದ ಮತ್ತೆ ಸಹಾಯಕ ಕಾರ್ಯದರ್ಶಿಯಾಗಿ ಮುಂಬಡ್ತಿ ಪಡೆದು ಶ್ರೀನಿವಾಸಪುರಕ್ಕೆ ವರ್ಗಾವಣೆ ಮಾಡಿಸಿಕೊಂಡು ಸಂಪೂರ್ಣವಾಗಿ ಆಡಳಿತ ಮಂಡಳಿಯನ್ನು ದಿಕ್ಕು ತಪ್ಪಿಸುತ್ತಿರುವ ಈ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡಿದರೆ ಮಾತ್ರ ವ್ಯವಸ್ಥೆ ಸರಿಯೋಗುತ್ತದೆ ಜೊತೆಗೆ ಕೊಳವೆಬಾವಿ ರೀಪೇರಿ ಇಲ್ಲದಿದ್ದರೂ ರೀಪೇರಿ ನೆಪದಲ್ಲಿ ಅದನ್ನು ಮೇಲಕ್ಕೆತ್ತಿ ಆನಂತರ ಮಾರುಕಟ್ಟೆಯಲ್ಲಿ ಭದ್ರತಾ ಸಿಬ್ಬಂದಿಯಿದ್ದರೂ ಕೇಬಲ್ ಕಳ್ಳತನವಾಗಿದ್ದರೂ ಅದರ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡದೆ ಅದರಲ್ಲೂ ಸಹ ಹಣ ಮಾಡುವ ದಂದೆ ಮಾಡಿದ್ದಾರೆ.

ಒಟ್ಟಾಗಿ ಮಾರುಕಟ್ಟೆಯ ಅಭಿವೃದ್ದಿ ಮಾಡಬೇಕಾದ ಅದ್ಯಕ್ಷರು ಮತ್ತು ಅಧಿಕಾರಿಗಳು ಹಣ ಮಾಡುವ ದಂದೆಯಲ್ಲಿ ತೊಡಗಿ ಮಾರುಕಟ್ಟೆಯನ್ನು ಸಾರ್ವಜನಿಕವಾಗಿ ಮಾರಾಟಕ್ಕಿಟ್ಟಿರುವುದು ರೈತರಿಗೆ ಮಾಡಿದ ದ್ರೋಹವಾಗಿದೆ. ಆದ್ದರಿಂದ ಮಾನ್ಯ ಸಹಾಯಕ ನಿರ್ದೇಶಕರು ಕೂಡಲೇ ಮಾರುಕಟ್ಟೆಯ ಅವ್ಯವಹಾರ ನಡೆಸಿರುವ ಅದ್ಯಕ್ಷರು ಮತ್ತು ಅಧಿಕಾರಿಗಳ ವಿರುದ್ದ 3 ದಿನದೊಳಗೆ ಸೂಕ್ತವಾದ ಅಧಿಕಾರಿಗಳಿಂದ ತನಿಖೆ ನಡೆಸಿ ಸೂಕ್ತವಾದ ಮಾಹಿತಿಯನ್ನು ಪಡೆದುಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು.ಇಲ್ಲವಾದರೆ ಮುಂದೆ ನಡೆಯುವ ಉಗ್ರ ಹೋರಾಟಕ್ಕೆ ತಾವೇ ನೇರ ಕಾರಣದ ಜೊತೆಗೆ ಆಗುವ ಅನಾಹುತಗಳಿಗೆ ನೀವೇ ಜವಬ್ದಾರಿಯಾಗಿರುತ್ತೀರಾ? ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಕಾರ್ಯದರ್ಶಿ ಮತ್ತು ಅದ್ಯಕ್ಷರು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಡಿಕೊಂಡು ಕೂಡಲೇ ಸಭೆಯನ್ನು ಕರೆಯುತ್ತೇವೆ ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದು ಎಂದು ಅದ್ಯಕ್ಷರು , ನೀವು ಹೇಳಿದ ಹಾಗೆ ಮಡಿದಿನಿ ಎಂದು ಕಾರ್ಯದರ್ಶಿಗಳು ಆರೋಪ ಪ್ರತ್ಯಾರೋಪ ಮಡಿಕೊಂಡು ಅನಂತರ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು,

ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ರಂಜಿತ್, ಗೌರವಾದ್ಯಕ್ಷ ಸಹದೇಹಪ್ಪ , ತಾ.ಉಪಾದ್ಯಕ್ಷರು, ಶೇಕ್ ಶಪಿಹುಲ್ಲಾ, ಶಿವಕುಮಾರ್, ಲಕ್ಷಣ, ಲೋಕೇಶ್, ಮುನಿಯಪ್ಪ, ಮುರಳಿ, ವಸಂತ, ಅಪ್ಪಿರೆಡ್ಡಿ, ಅಶೋಕ, ತೆರ್ನಹಳ್ಳಿ ವೆಂಕಿ, ಮುಂತಾದವರಿದ್ದರು

By Suddi9

Leave a Reply

Your email address will not be published. Required fields are marked *