ಬಂಟ್ವಾಳ:ಜೆಸಿಐ ಜೋಡುಮಾರ್ಗ ನೇತ್ರಾವತಿ ಮತ್ತು ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಜಂಟಿ ಆಶ್ರಯದಲ್ಲಿ ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಸಶಕ್ತೀಕರಣ ತರಬೇತಿ ಕಾರ್ಯಕ್ರಮ ಜರುಗಿತು.
ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳಿ ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗªಹಿಸುವುದರಿಂದ ತಮ್ಮ ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ ಸಹಕಾರಿಯಾಗುತ್ತದೆ ಹಾಗೂ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶದ ಈ ಶಾಲೆಯಲ್ಲಿ ನಡೆಸುತ್ತಿರುವ ಜೇಸಿ ಹಾಗೂ ರೋಟರಿ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು. ಜೇಸಿ ಅಧ್ಯಕ್ಷ ಹರ್ಷರಾಜ್ ಸಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಶ್ರೀ ಕಮಲಾಕ್ಷ ಕಲ್ಲಡ್ಕ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಕಾರ್ಯದರ್ಶಿ ಶ್ರೀಮತಿ ಪಲ್ಲವಿ ಕಾರಂತ್, ಜೇಸಿ ರಾಜ್ಯ ತರಬೇತುದಾರರಾದ ಜಯಾನಂದ ಪೆರಾಜೆ, ಶಿಕ್ಷಕರಾದ ಸದಾಶಿವ ನಾಯಕ್, ವರಮಹಾಲಕ್ಷ್ಮೀ, ಜ್ಯೂನಿಯರ್ ಜೇಸಿ ಅಧ್ಯಕ್ಷ ರೋನಿತ್ ಹಾಗೂ ಇಂಟಾರ್ಯಾಕ್ಟ್ ಅಧ್ಯಕ್ಷೆ ವಿದ್ಯಾ ಉಪಸ್ಥಿತರಿದ್ದರು.
ಜೇಸಿ ಉಪಾಧ್ಯಕ್ಷ ಹರಿಪ್ರಸಾದ್ ಕುಲಾಲ್ ಸ್ವಾಗತಿಸಿ ವಂದಿಸಿದರು. ಸಮಾರಂಭದ ಬಳಿಕ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ನಾಯಕತ್ವ, ಪರಿಣಾಮಕಾರಿ ಸಂಬಂಧ, ಗುರಿ ನಿಗದಿ, ನಿಮ್ಮನ್ನು ನೀವು ತಿಳಿದುಕೊಳ್ಳಿ, ಸಮಯ ನಿರ್ವಹಣೆ, ಸ್ಮರಣೆ ಶಕ್ತಿ ಹೆಚ್ಚಿಸುವ ಕಲೆ ಮುಂತಾದ ವಿಯಗಳಲ್ಲಿ 2 ದಿನಗಳ ತರಬೇತಿ ಕಾರ್ಯಕ್ರಮವನ್ನು ತರಬೇತುದಾgರಾದ ಜೇಸಿ ಜಯಾನಂದ ಪೆರಾಜೆ, ಜೇಸಿ ರಾಕೇಶ್ ಹೊಸಬೆಟ್ಟು ಹಾಗು ಜೇಸಿ ಅಶ್ವಿನಿ ಐತಾಳ್ ನಡೆಸಿಕೊಟ್ಟರು.
