ಪರಿಸರದ  ಬಗ್ಗೆ ಅರಿವಿಲ್ಲದ ಜನರಿಂದಾಗಿ ಪ್ರಕೃತಿಗೆ ಹಾನಿಯಾಗುತ್ತಿದೆ , ಪ್ರಕ್ರತಿಯು ಸಮತೋಲನ ಕಳೆದುಕೊಂಡು ಭೂಮಿಯ ತಾಪಮಾನ ಹೆಚ್ಚಳ, ನೀರಿನ ಬರ ಎದುರಿಸುವಂತಾಗಿದೆ . ವಿದ್ಯಾರ್ಥಿಗಳಿಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಆ ಮೂಲಕ ಮುಂದಿನ ದಿನಗಳಲ್ಲಿ ಪರಿಸರದ ರಕ್ಷಣೆ ಅರಣ್ಯ ಉಳಿಸಿ ಬೆಳೆಸುವ ಕಾರ್ಯ ವಾಗಬೇಕು ಎಂದು ಪುರುಷೋತ್ತಮ ಭಂಡಾರಿ ಅಡ್ಯಾರ್ ರವರು ಶ್ರೀ ರಾಮಾ ವಿದ್ಯಾ ಸಂಸ್ಥೆ  ಫರಂಗಿಪೇಟೆ ಇಲ್ಲಿ ರೋಟರಿ ಕ್ಲಬ್ ಫರಂಗಿಪೇಟೆ ಇವರು ಆಯೋಜಿಸಿದ  ವನ ಮಹೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.

IMG_5141

 ಈ ಸಂಧರ್ಭ ದಲ್ಲಿ ರೋಟರಿ ಕ್ಲಬ್ ಫರಂಗಿಪೇಟೆ ಅಧ್ಯಕ್ಷ ಜಯರಾಮ ಶೇಕ , ಬಂಟ್ವಾಳ ರೋಟರಿ ಕ್ಲಬ್  ನ  ರಿತೇಶ್ ಬಾಳಿಗಾ ,   ಶ್ರೀರಾಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ವಜ್ರನಾಭ ಶೆಟ್ಟಿ ಅರ್ಕುಳ ಬೀಡು , ಶ್ರೀ ರಾಮ ಶಾಲಾ ಸಂಚಾಲಕ ಗೋವಿಂದ ಶೆಣೈ ,  ರೋಟರಿ ಕ್ಲಬ್ ಫರಂಗಿಪೇಟೆ ಸದಸ್ಯರುಗಳಾದ  ಕಂಪ ಸದಾನಂದ ಆಳ್ವ , ಸುರೇಂದ್ರ ಕಂಬಳಿ ಅಡ್ಯಾರ್, ಜಯಶೀಲ ಅಡ್ಯಂತಾಯ , ನಾರಾಯಣ ಹೆಗ್ಡೆ , ರಮೇಶ್ ಶೆಟ್ಟಿ , ಶ್ಯಾಮಲಾ ಆರ್ ಶೆಟ್ಟಿ , ನೌಶಾದ್ ಆಲಿ, ರಮೇಶ್ , ಪರಿಸರ ರಾಜ್ಯ ಪ್ರಶಸ್ತಿ ವಿಜೇತ ಮಾದವ ಉಳ್ಳಾಲ್ , ಮಂಗಳಾದೇವಿ ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜ್ಯೋತಿ ಶೇಕ ,ಶ್ರೀ ರಾಮ ಪ್ರೌಢ  ಶಾಲಾ  ಮುಖ್ಯ ಶಿಕ್ಷಕಿ  ಶ್ರೀ ವಿದ್ಯಾ , ಮತ್ತಿತರರು ಉಪಸ್ಥಿತರಿದ್ದರು  ಮುಖ್ಯ ಶಿಕ್ಷಕ ದೇವದಾಸ್ ಕೆ ಆರ್ ರವರು ಸ್ವಾಗತಿಸಿದರು ,ಶಿಕ್ಷಕ  ಜಯ ಕುಮಾರ್ ರವರು ವಂದಿಸಿದರು
   ಪರಿಸರಕ್ಕೆ ಸಂಬಂದಿಸಿದ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

By Suddi9

Leave a Reply

Your email address will not be published. Required fields are marked *