ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಯಕ್ಷ ಭಾರತ ಪ್ರತಿಷ್ಠಾನ ವಿಟ್ಲ ಮತ್ತು ಭಾರತ ಅಡಿಟೋರಿಯಂ ಚಂದಳಿಕೆ ಇದರ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಶ್ರೀ ಗುರು ಯೋಗಸಂಸ್ಥೆ ಮತ್ತು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ನ ಯೋಗಗುರು ಆನಂದ ಶೆಟ್ಟಿ ಇವರಿಂದ ವಂದಳಿಕೆ ಭಾರತ ಅಡಿಟೋರಿಯಂನಲ್ಲಿ ಬೆಳಿಗ್ಗೆ 5-30 ರಿಂದ 7 ರ ತನಕ, 21-06-2019 ರಿಂದ 28-06-2019ರ ವರೆಗೆ ನಡೆಯುವ ಉಚಿತ ಯೋಗ ತರಬೇತಿ ಕಾರ್ಯಕ್ರಮವನ್ನು ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು.

ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ರಾಮದಾಸ ಶೆಣೈ, ನ್ಯಾಯವಾದಿ ಶೀಕೃಷ್ಣ ಮತ್ತು ಮೋನಪ್ಪ ಗುರುಸ್ವಾಮಿ ಉಪಸ್ಥಿತರಿದ್ದರು. ಭಾರತ ಆಡಿಟೋರಿಯಂ ಮಾಲಕ ಸಂಜೀವ ಪೂಜಾರಿ ಕಾರ್ಯಕ್ರಮ ಸಂಯೋಜಿಸಿದರು.

