ಬಂಟ್ವಾಳ: ಉಳಿ ಕಕ್ಯಬೀಡು ಶ್ರೀ ಪಂಚದುರ್ಗಾ ಪ್ರೌಢ ಶಾಲೆಯ ಸ್ಥಾಪನಾ ದಿನಾಚರಣೆ ಪ್ರಯುಕ್ತ ಶ್ರೀ ಸತ್ಯಸಾಯಿ ಸೇವಾಸಮಿತಿ ಮತ್ತು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ದಾನಿಗಳು ಕೊಡಮಾಡಿದ ಸುಮಾರು 1ಲ.ರೂ.ಮೊತ್ತದ ಸಮವಸ್ತ್ರ ಮತ್ತು ಲೇಖನ ಸಾಮಾಗ್ರಿ ವಿತರಣೆ ಹಾಗೂ 2018-19ರ ಎಸೆಸೆಲ್ಸಿ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಗುರುವಾರ ಕಕ್ಯಬೀಡು ಪ್ರೌಢ ಶಾಲಾ ಸಂಭಾಗಣದಲ್ಲಿ ಜರಗಿತು.
ಉಪ್ಪಿನಂಗಡಿ ಸ.ಪ.ಪೂ. ಕಾಲೇಜು ಶಿಕ್ಷಕ ಗುಡ್ಡಪ್ಪ ಬಲ್ಯ ಅವರು ದಿಕ್ಸೂಚಿ ಭಾಷಣ ಮಾಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಅಂತಃಶಕ್ತಿಯನ್ನು ಬೆಳಗಿಸುವುದೇ ಶಿಕ್ಷಣ. ಉತ್ತಮ ಸಂಸ್ಕಾರಯುತ ಶಿಕ್ಷಣದಿಂದ ಉತ್ತಮ ಪ್ರಜೆಗಳಾಗಲು ಸಾಧ್ಯ. ವಿದ್ಯಾರ್ಥಿಗಳನ್ನು ರಾಷ್ಟ್ರದ ಸಂಪತ್ತನ್ನಾಗಿಸುವ ಹೊಣೆ ಹೆತ್ತವರು ಮತ್ತು ಶಿಕ್ಷಕರದ್ದಾಗಿದೆ ಎಂದು ಹೇಳಿದರು.

ಶಾಲಾ ಸಂಚಾಲಕ ಕೆ.ಜಾರಪ್ಪ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, 31ವರ್ಷಗಳ ಹಿಂದೆ ತೀರ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಸರಕಾರಿ ಅನುದಾನವಿಲ್ಲದೆ ಊರಿನ ಅಭಿವೃದ್ಧಿಗಾಗಿ ಶಾಲೆಯನ್ನು ಸ್ಥಾಪಿಸಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಊರವರ ಶ್ರದ್ಧೆ ,ಪ್ರೀತಿಯಿಂದ ಶಾಲೆ ಬೆಳೆದು ಬಂದಿದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣದ ಸರ್ವ ಸೌಲಭ್ಯಗಳನ್ನು ಒದಗಿಸುವಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವಿದ್ಯಾದಾನಕ್ಕೆ ಸಹಕರಿಸಿದವರು ಶ್ಲಾಘನೀಯರು ಎಂದು ಹೇಳಿದರು.
ಸರಪಾಡಿ ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್,ಕಕ್ಯಬೀಡು ಶ್ರೀ ಕ್ಷೇತ್ರ ಪ್ರಧಾನ ಅರ್ಚಕ ಶ್ರೀನಿವಾಸ ಅರ್ಮುಡತ್ತಾಯ, ತಾ.ಪಂ. ಸದಸೆÀ್ಯ ಬೇಬಿ ಕೃಷ್ಣಪ್ಪ,ಗ್ರಾ.ಪಂ. ಅಧ್ಯಕ್ಷೆ ದೀನಾಕ್ಷಿ, ಕಕ್ಯಪದವು ಶ್ರೀ ಬ್ರಹ್ಮ ಬÉೈದರ್ಕಳ ಗರಡಿ ಕ್ಷೇತ್ರ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ. ಚೆನ್ನಪ್ಪ ಸಾಲಿಯಾನ್, ಉಳಿ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕ ರಾಮ ಪಿ.ಸಾಲಿಯಾನ್, ಉಳಿಬÉೈಲು ದ.ಕ.ಜಿ.ಪ.ಹಿ.ಪ್ರಾ.ಶಾಲೆ ಸಹಶಿಕ್ಷಕ ಅಕ್ಬರ್ ಆಲಿ ,ನಡುಮೊಗರು ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ಚಂದ್ರ ಕೆ.,ಬಡೆಕೊಟ್ಟು ಸ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ಪ್ರಭು ದೊಡ್ಡಮನಿ, ಗ್ರಾ.ಪಂ. ಉಪಾಧ್ಯಕ್ಷ ಸುರೇಶ್ ಮೈರ, ಸದಸ್ಯರಾದ ಸಂಜೀವ ಗೌಡ ಅಗಲ,ಚಿದಾನಂದ ರೈ,ಚೇತನ್ ಹೂರ್ದೊಟ್ಟು, ವಿಶಾಲಾಕ್ಷಿ, ಶಾಂತಾ, ಗುಲಾಬಿ, ದೈವಸ್ಥಳ ಪ್ರಾ.ಆ. ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಡೈಸಿ, ಶ್ರೀ ಕ್ಷೇತ್ರ ಕಕ್ಯಬೀಡು ಜೀರ್ಣೊದ್ಧಾರ ಸಮಿತಿ ಸದಸ್ಯ ವಿಶ್ವನಾಥ ಸಾಲ್ಯಾನ್ ಬಿತ್ತ, ಕಾರ್ಯದರ್ಶಿ ನಾರಾಯಣ ರೈ, ಶ್ರೀ ಸತ್ಯಸಾಯಿ ಸೇವಾಸಮಿತಿ ಕಾರ್ಯದರ್ಶಿ ಯೋಗೀಶ್, ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಮೇನೇಜರ್ ವೀರೇಂದ್ರ ಕುಮಾರ್ ಜೈನ್,ನಿವೃತ್ತ ಶಿಕ್ಷಕ ಮುತ್ತಪ್ಪ ಗೌಡ, ಉಳಿ ಸೇ.ಸ.ಬ್ಯಾಂಕ್ ಮೇನೇಜರ್ ನಾರಾಯಣ,ಯಕ್ಷಗಾನ ಭಾಗವತ ಗಿರೀಶ್ ರೈ, ಪ್ರಮುಖರಾದ ರಾಮಯ್ಯ ಭಂಡಾರಿ,ಜೀರ್ಣೋದ್ಧಾರ ಸಮಿತಿ ಸದಸ್ಯರು, ಶಿಕ್ಷಕ ವೃಂದ ಹಾಗೂ ಪೆÇೀಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸೆಸೆಲ್ಸಿ ಸಾಧಕ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಸಮವಸ್ತ್ರ,ಲೇಖನ ಸಾಮಾಗ್ರಿ ವಿತರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ ಶೆಟ್ಟಿ ಅವರು ಸ್ವಾಗತಿಸಿದರು. ಶ್ರೀ ಕ್ಷೇತ್ರ ಕಕ್ಯಬೀಡು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು.ದಾಮೋದರ ನಾಯಕ್‍ಅವರು ವಂದಿಸಿದರು. ಶಿಕ್ಷಕ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
