ಕುಪ್ಪೆಪದವು : ಜನಸಾಮಾನ್ಯರಿಗೆ ಅತೀ ಹತ್ತಿರವಾಗಿರುವ ಮತ್ತು ಜನಸಾಮಾನ್ಯರಿಂದ ಹೆಚ್ಚು ಹಿಡಿಶಾಪ ಹಾಕಿಸಿಕೊಳ್ಳುವ ಸರಕಾರಿ ಇಲಾಖೆಯೆಂದರೆ ಮೆಸ್ಕಾಂ. ಕೆಲವು ಸಂದರ್ಭಗಳಲ್ಲಿ ಮೆಸ್ಕಾಂನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗುವುದು ಇದೆ. ಇದೀಗ ಮಳೆಗಾಲ ಪ್ರಾರಂಭವಾಗಿದೆ. ಮೆಸ್ಕಾಂನ ಗುರುಪುರ ಕೈಕಂಬ ಉಪವಿಭಾಗದಲ್ಲಿ ಗುರುಪುರ, ಅಡ್ಡೂರು, ಮಳಲಿ, ಕಿಲೆಂಜಾರು, ಕುಳವೂರು, ಮುಚ್ಚೂರು ವ್ಯಾಪ್ತಿ, ಎಡಪದವು, ಮಿಜಾರು ಪಂಚಾಯತ್, ಅದ್ಯಪಾಡಿ, ಕಿನ್ನಿಕಂಬಳ ಪ್ರದೇಶಗಳು ಬರುತ್ತವೆ. ಇವುಗಳನ್ನು ಮೂರು ಸೆಕ್ಷನ್ ಆಫೀಸ್‍ಗಳಾಗಿ ವಿಂಗಡಿಸಲಾಗಿದೆ.

1ಮುಚ್ಚೂರು ಮತ್ತು ಎಡಪದವು ವ್ಯಾಪ್ತಿಯಲ್ಲಿ ಹೆಚ್ಚಿನ ಹಳೇ ತಂತಿಗಳನ್ನು ಬದಲಾಯಿಸಲಾಗಿದೆ ಅಲ್ಲದೇ ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ಸಿದ್ದವಾಗಿದೆ. ಕೈಕಂಬ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿಗಳಿಗೆ ತಾಗುವ ಮರಗಳನ್ನು ಕತ್ತರಿಸಲಾಗಿದೆ ಅಲ್ಲದೇ ದುರ್ಬಲವಾಗಿದ್ದ ಹಳೆಯ ತಂತಿಗಳನ್ನು ಬದಲಾಯಿಸಲಾಗಿದೆ. ಇನ್ನು ಕೆಲವು ಬದಲಾಯಿಸಲು ಬಾಕಿ ಉಳಿದಿದೆ ಎಂದು ಮೆಸ್ಕಾಂ ಅಧಿಕಾರಿ ಮಾಹಿತಿ ನೀಡಿದ್ದಾರೆ. ಮಳೆಗಾಲದಲ್ಲಿ ಅನಾಹುತಗಳಾಗದಂತೆ ಗರಿಷ್ಟ ಮುನ್ನೆಚ್ಚರಿಕೆ ವಹಿಸಲಾಗಿದ್ದು ಕೆಲವು ಕಡೆಗಳಲ್ಲಿ ಅನೀರಿಕ್ಷಿತವಾಗಿ ಕೆಲವು ಮರಗಳು ಉರುಳಿ ಬಿದ್ದು ಆಗುವ ಅನಾಹುತಗಳನ್ನು ತಪ್ಪಿಸುವುದು ಕಷ್ಟವಾದುದು, ಬೇಸಿಗೆ ಕಾಲದಲ್ಲಿ ಪ್ರತಿ ಮಂಗಳವಾರ ದುರಸ್ತಿಗೆಂದು ಇಡೀ ದಿನ ವಿದ್ಯುತ್ ಕಡಿತವಾಗುತ್ತದೆ. ಆದರೆ ಒಂದೇ ಮಳೆಗೆ ವಿದ್ಯುತ್ ಕೈಕೊಡುತ್ತದೆ.

2ಬೇಸಿಗೆ ಕಾಲದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು ಇದಕ್ಕೆ ಕಾರಣ ಎಂದು ಜನಸಾಮಾನ್ಯರ ಆರೋಪವಾಗಿದೆ. ಮಳೆಗಾ¯ದಲ್ಲಿ ಜನರು ಕೂಡ ಜಾಗರೂಕರಾಗಬೇಕಾಗಿದೆ. ತುಂಡಾಗಿ ಬಿದ್ದ ತಂತಿಗಳನ್ನು ಮುಟ್ಟುವುದಾಗಲಿ, ವಿದ್ಯುತ್ ಕಂಬಗಳನ್ನು ಮುಟ್ಟುವುದಾಗಲಿ ಮಾಡಬಾರದು.
ನಿರಂತರ 24 ಗಂಟೆ ವಿದ್ಯುತ್ ಪೂರೈಕೆಯ ಮಾದರಿ ಗ್ರಾಮಗಳಾಗಿ ಆಯ್ಕೆಯಾಗಿರುವ ಕಿಲೆಂಜಾರು ಮತ್ತು ಕುಳವೂರು ಗ್ರಾಮಗಳಲ್ಲಿ ಈ ಯೋಜನೆ ವಿಫಲಗೊಂಡಿದೆ ಇಲ್ಲಿ ಪದೇಪದೇ ವಿದ್ಯುತ್ ಕೈಕೊಡುತ್ತಿದೆ.

3
ತುರ್ತಾಗಿ ಆಗಬೇಕಾದ ಕೆಲಸಗಳು :
ಮುತ್ತೂರು ಪಂಚಾಯತ್ ವ್ಯಾಪ್ತಿಯ ಕುಳವೂರು ನಾಗಂದಡಿ, ಕಲ್ಪನೆ ಮತ್ತು ಗೆಂದಡ್ಪು ಅಂಗನವಾಡಿ ಕೇಂದ್ರದ ಬಳಿ ಹಾದು ಹೋಗಿರುವ ತಂತಿಗಳು ದುರ್ಬಲಗೊಂಡು ಪದೇ ಪದೇ ತುಂಡಾಗಿ ಬೀಳುತ್ತಿದ್ದರೂ ಬದಲಾಯಿಸಲಾಗಿಲ್ಲ. ಕಳೆದ ವರ್ಷ ಇಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯಿಂದ ಅಂಗನವಾಡಿ ಮಕ್ಕಳು ಕೂದಲೆಳೆಯ ಅಂತರದಿಂದ ಪಾರಾಗಿದ್ದರು. ಇಲ್ಲಿ ಹಳೆಯ ತಂತಿಗಳನ್ನು ಬದಲಾಯಿಸಬೇಕಾದುದು ತೀರಾ ಅಗತ್ಯ.
ಕುಪ್ಪೆಪದವು ಕಲ್ಲಾಡಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ರಸ್ತೆ ಅಂಚಿನಲ್ಲಿ ಉಳಿದಿದ್ದ ಕೆಲವು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿದ್ದರೂ, ಇನ್ನು ಕೆಲವು ಹಾಗೆ ಉಳಿದುಕೊಂಡಿವೆ. ವಾಹನಗಳು ಎದುರು ಬದುರಾದಾಗ ಅಪಘಾತಗಳಾಗುವ ಸಂಭವ ಇದೆ. ಆದುದರಿಂದ ಇವುಗಳನ್ನು ರಸ್ತೆಯ ಅಂಚಿನಿಂದ ದೂರಕ್ಕೆ ಸ್ಥಳಾಂತರಿಸಬೇಕಾಗಿದೆ.
ಬಾರ್ದಿಲ ಟ್ರಾನ್ಸ್‍ಪಾರ್ಮರ್‍ನಿಂದ ಅಮ್ಟಾಡಿ, ಪೆÇಡುಂಬೋಡಿ ಮೂಲಕ ಮೇಲಿನ ಬಾರ್ದಿಲಕ್ಕೆ ಹಾದುಹೋಗಿರುವ ತಂತಿಗಳು ಪೆÇಡುಂಬೋಡಿ ಹರೀಶ್ ಪೂಜಾರಿ ಎಂಬವರ ಮನೆಯ ಪಕ್ಕದಲ್ಲಿ ಕೈಗೆ ತಾಗುವಷ್ಟು ಕೆಳಭಾಗದಲ್ಲಿ ಹಾದುಹೊಗಿದ್ದು ಅತೀ ಅಪಾಯಕಾರಿಯಾಗಿವೆ ಇವುಗಳನ್ನು ಎತ್ತರಿಸಬೇಕಾಗಿದೆ.

ಕೈಕಂಬ ಉಪವಿಭಾಗದಲ್ಲಿ ಹೆಚ್ಚಿನ ಹಳೆಯ ತಂತಿಗಳನ್ನು ಬದಲಾಯಿಸಲಾಗಿದೆ, ಇನ್ನೂ ಕೆಲವು ಬಾಕಿ ಉಳಿದಿವೆ ಅವುಗಳನ್ನು ಬದಲಾಯಿಸಲಾಗುವುದು. ವಿದ್ಯುತ್ ಲೈನ್‍ಗಳ ಅಕ್ಕಪಕ್ಕದ ಮರದ ಕೊಂಬೆಗಳನ್ನು ಕತ್ತರಿಸಲಾಗಿದ್ದು ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ಸಿದ್ದತೆ ನಡೆಸಲಾಗಿದೆ. ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಬೇಕು. ತುರ್ತು ಸಂದರ್ಭದಲ್ಲಿ 1912 ಅಥವಾ ಸ್ಥಳೀಯ ಲೈನ್‍ಮ್ಯಾನ್‍ಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು.
ಮೋಹನ್ ಟಿ.
ಅಸಿಸ್ಟೆಂಟ್ ಇಂಜಿನಿಯರ್
ಮೆಸ್ಕಾಂ ಉಪವಿಭಾಗ
ಗುರುಪುರ ಕೈಕಂಬ

By Suddi9

Leave a Reply

Your email address will not be published. Required fields are marked *