ಬಂಟ್ವಾಳ: ಶಿವಾಜಿಯ ಪಟ್ಟಾಭಿಷೇಕ ದಿನವನ್ನು ಹಿಂದೂ ಸಾಮ್ರಾಜ್ಯೋತ್ಸವ ದಿನವನ್ನಾಗಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರದಲ್ಲಿ ಅತಿಥಿಯಾಗಿದ್ದ ಶ್ರೀರಾಮ ಪ್ರೌಢ ಶಾಲೆಯ ನಿವೃತ್ತ ದೈಹಿಕ ಶಿಕ್ಷಕರಾದ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ ವೀರಶಿವಾಜಿಯ ಪಟ್ಟಾಭಿಷೇಕದ ಕಥೆ, ಸಾಧನೆ, ಹೋರಾಟ, ಶೌರ್ಯವನ್ನು ವಿವರಿಸಿ ಕಥೆಯನ್ನು ಕೇವಲ ಕಥೆಯಾಗಿ ತೆಗೆದುಕೊಳ್ಳದೆ ಅದರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು,ಮೂಲಕ ರಾಷ್ಟ್ರದ ಏಳಿಗೆಗಾಗಿ ನಿತ್ಯ ದುಡಿಯುವ ಚೇತನವಾಗಿ ಬೆಳೆಯಬೇಕು. ಎಂದರು. 
ವಿದ್ಯಾರ್ಥಿನಿಯರು ಸಾಮೂಹಿಕ ಗೀತೆಯನ್ನು ಹಾಡಿದರು.ವೇದಿಕೆಯಲ್ಲಿ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತಿಯಿದ್ದರು.ಶಿಕ್ಷಕರಾದ ವೇದಾವತಿ ನಿರೂಪಿಸಿ, ದಿವ್ಯಶ್ರೀ ಸ್ವಾಗತಿಸಿ, ಕುಸುಮಾ ವಂದಿಸಿದರು
