ಕೈಕಂಬ:ಗುರುಪುರ ಕೈಕಂಬದ ಮಾರುಕಟ್ಟೆ ಎದುರುಗಡೆಯ ಟ್ರಾನ್ಸ್ ಪಾರ್ಮರ್‍ಗೆ ಮೈತಿಕ್ಕಿ ವಿದ್ಯುತ್ ಅಪಘಾತಕ್ಕೆ ಹಸು ಬಲಿಯಾದ ಘಟನೆಯ ನಂತರ ಎಚ್ಚೆತ್ತುಕೊಂಡ ಮೇಸ್ಕಾಂ ಟ್ರಾನ್ಸ್‍ಪಾರ್ಮರ್ ಸುತ್ತ ಜನಜಾನುವಾರುಗಳು ಸುಳಿಯದಂತೆ ತಡೆಬೇಲಿ ನಿರ್ಮಿಸಿದೆ. ಕಳೆದ ಶುಕ್ರವಾರ ಟ್ರಾನ್ಸ್ ಪಾರ್ಮರ್‍ನ ಕಂಬಕ್ಕೆ ಮೈ ತಿಕ್ಕಿದಾಗ ವಿದ್ಯುತ್ ಅಘಾತವಾಗಿ ಅಂದಾಜು 50ಸಾವಿರ ಬೆಳೆಬಾಳುವ ಜರ್ಸಿ ದನವೊಂದು ಸಾವಿಗೀಡಾಗಿತ್ತು.

15vp mescomಟ್ರಾನ್ಸ್‍ಪಾರ್ಮರ್‍ನ ವಯರ್‍ನಿಂದ ವಿದ್ಯುತ್ ಸೋರಿಕೆಯಾಗಿ ಮಳೆಯಿಂದಾಗಿ ಇಡೀ ಕಂಬದಲ್ಲಿ ಪ್ರವಹಿಸುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಜನ ಸಂಚಾರ ಹೆಚ್ಚಾಗಿರುವ ಇಲ್ಲಿನ ಟ್ರಾನ್ಸ್ ಪಾರ್ಮರ್‍ಗೆ ಯಾವುದೇ ತಡೆ ಬೇಲಿ ಇರಲಿಲ್ಲ. ಹಸುವಿನ ಸಾವಿನಿಂದ ಎಚ್ಚೆತ್ತುಕೊಂಡ ಮೆಸ್ಕಾಂ ಇದೀಗ ಟ್ರಾನ್ಸ್ ಪಾರ್ಮರ್ ಸುತ್ತ ಬೇಲಿ ನಿರ್ಮಿಸಿದೆ.

15vp mescom-2ಇದೇ ಹಲವಾರು ಸ್ಥಳಗಳಲ್ಲಿ ಟ್ರಾನ್ಸ್ ಪಾರ್ಮರ್‍ಗಳಿದ್ದು ಇವುಗಳಿಗೂ ಇದೇ ರೀತಿಯ ತಡೆ ಬೇಲಿ ನಿರ್ಮಿಸುವ ಮೂಲಕ ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯಬೇಕು ಎಂದು ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ.

By Suddi9

Leave a Reply

Your email address will not be published. Required fields are marked *