ಮೂಡುಬಿದಿರೆ:ಶ್ರೀಕ್ಷೇತ್ರ ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದದಲ್ಲಿ ಏ.24ರಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಏ.29ರಂದು ಬ್ರಹ್ಮಕಲಶಾಭಿಷೇಕ ನಡೆಯಲಿದೆ. ದಿನ ವೈದಿಕ ಕಾರ್ಯಕ್ರಮಗಳು, ಸಂಜೆ 7ರಿಂದ 8ರವರೆಗೆ ಧಾರ್ಮಿಕ ಸಭೆ, ಬಳಿಕ ಸಾಂಸ್ಕøತಿಕ ವೈವಿಧ್ಯಗಳು ಜರಗಲಿವೆ.

ಏ.24ರಂದು ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಯಂಕಾಲ 7ಗಂಟೆಯಿಂದ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ ಈಶ್ವರ ಭಟ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಪುಚ್ಚೆಮೊಗರು ಎಲಿಯಾ ದರ್ಗಾಶರೀಫ್ನ ಧರ್ಮಗುರು ಬಿ.ಕೆ ಅಲ್ತಾಫ್ ಮುಸ್ಲಿಯಾರ್, ಬಾರ್ದಿಲ ಮಸ್ಚಿದುರ್ರಹ್ಮಾನ್ಮ ಧರ್ಮಗುರು ಕಾಸಿಂ ಮದನಿ, ಹೊಸಬೆಟ್ಟು ಚರ್ಚ್ ಧರ್ಮಗುರು ಸಂತೋಷ್ ರೊಡ್ರಿಗಸ್, ಅಲ್ಪಸಂಖ್ಯಾತ ಮೂಡುಬಿದಿರೆ ವಿಭಾಗದ ಅಧ್ಯಕ್ಷ ಬಿ.ಎ ಉಸ್ಮಾನ್, ಮೂಡುಬಿದಿರೆ ಶ್ರೀಹನುಮಂತ ದೇವಸ್ಥಾನ, ವೆಂಟಕರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ, ಎಂಸಿಎಸ್ ಬ್ಯಾಂಕ್ ಕಾರ್ಯನಿರ್ವಾಹಣಾಧಿಕಾರಿ ಎಂ.ಚಂದ್ರಶೇಖರ್ ಅತಿಥಿಗಳಾಗಿರುವರು. ಸಭೆಯಲ್ಲಿ ಶೀನ ನಾಯ್ಕ್ ಕೊಲ್ಲೊಟ್ಟು, ಸಂಕಪ್ಪ ಸಾಲ್ಯಾನ್ ದೇವರಗುಡ್ಡೆ, ಅಣ್ಣಿ ದೇವಾಡಿಗ ದಂಬೆದಕೋಡಿ ಅವರನ್ನು ಸನ್ಮಾನಿಸಲಾಗುವುದು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿಠಲ ನಾಯಕ್ ಹಾಗೂ ಬಳಗ ಕಲ್ಲಡ್ಕ ಅವರಿಂದ ಗೀತ-ಸಾಹಿತ್ಯ-ಸಂಭ್ರಮ ನಡೆಯಲಿದೆ.

ಏ.25ರಂದು ಶ್ರೀಕ್ಷೇತ್ರ ಪೊಳಲಿಯ ಆನುವಂಶಿಕ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಉದ್ಯಮಿಗಳಾದ ತಿಮ್ಮಯ್ಯ ಶೆಟ್ಟಿ, ಸಿ.ಬಿ ಥೋಮಸ್, ಮನೋಜ್ ಶೆಟ್ಟಿ, ವಸಂತ್ ಕುಮಾರ್ ಭಟ್, ಪ್ರೇಮನಾಥ್ ಮಾರ್ಲ, ರಾಘವೇಂದ್ರ ಪ್ರಭು ಅತಿಥಿಗಳಾಗಿರುವರು. ಪದ್ಮನಾಭ ಶೆಟ್ಟಿ, ಕೊಲಾೈಕೋಡಿ, ಆದಪ್ಪ ಪೂಜಾರಿ ಬಾರ್ದಿಲ, ಶೀನ ಪೂಜಾರಿ ಹೊಸಮರಾಯಪದವು ಅವರನ್ನು ಸನ್ಮಾನಿಸಲಾಗುವುದು. ಶ್ರೀಕ್ಷೇತ್ರ ಇರುವೈಲು ದಶಾವತಾರ ಯಕ್ಷಗಾನ ಮಂಡಳಿಯಿಂದ ಕದಂಬ ಕೌಶಿಕೆ ಕನ್ನಡ ಹಾಗೂ ಇರ್ವರ ಉಂಡಾತಿನಾರ್ ತುಳು ಯಕ್ಷಗಾನ ನಡೆಯಲಿದೆ.
ಏ.26ರಂದು ಇಡೀ ದಿನ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಸಾಯಂಕಾಲ 7ಗಂಟೆಯಿಂದ ಪೊಳಲಿ ಕ್ಷೇತ್ರದ ಆನುವಂಶಿಕ ಮೊಕ್ತೇಸರ ತಾರಾನಾಥ ಆಳ್ವ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಉದ್ಯಮಿ ಸುಧಾಕರ ಪೂಂಜ, ಸುರೇಶ್ ಶೆಟ್ಟಿ, ಜಯರಾಮ್ ಶೆಟ್ಟಿ
ವಕೀಲೆ ಶ್ವೇತಾ ಜೈನ್, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು. ಗೋಪಾಲ ಪೂಜಾರಿ ಮಜಲು, ಸುರೇಶ್ ಆಚಾರ್ಯ ಕೊಪ್ಪಲ ಅವರನ್ನು ಸನ್ಮಾನಿಸಲಾಗುವುದು. ಇರುವೈಲು ಗ್ರಾಮದ ಅಂಗವಾಡಿ ಪುಟಾಣಿಗಳಿಂದ ವೈವಿಧ್ಯಯ ಕಾರ್ಯಕ್ರಮ ನಡೆಯಲಿದೆ. ಗತವೈಭವ ಕೂಟ ಮೂಲ್ಕಿ ಕಲಾವಿದರಿಂದ ಕಾರ್ನಿಕದ ಗತವೈಭವ ರೂಪಕ ನಡೆಯಲಿದೆ.
ಏ.27 ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾಯಂಕಾಲ 7ಗಂಟೆಯಿಂದ ಉದ್ಯಮಿ ಕೆ.ಶ್ರೀಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲು, ಸೇಸಪ್ಪ ಕೋಟ್ಯಾನ್, ನಮ್ಮ ಕುಡ್ಲ ಚಾನಲ್ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರಾ, ಮಕ್ಕಳ ತಜ್ಞ ಡಾ.ಮುರಳೀಕೃಷ್ಣ ಆರ್.ವಿ, ಉದ್ಯಮಿ ಮೇಘನಾಥ್ ಶೆಟ್ಟಿ, ಶಿವಾನಂದ ಪ್ರಭು ಅತಿಥಿಗಳಾಗಿರುವರು. ಬಾಬು ಪೂಜಾರಿ ದೇವರಗುಡ್ಡೆ, ತನಿಯ ಮುಳಿಬೆಟ್ಟು, ಶೇಖರ ದಡ್ಡೆಗುರಿ ಅವರನ್ನು ಸನ್ಮಾನಿಸಲಾಗುವುದು.
ಏ.28ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾಯಂಕಾಲ 7ಗಂಟೆಯಿಂದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾರ್ಕಳ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕೃಷ್ಣ ಟಿ., ಶ್ರೀನಿವಾಸ ಆಸ್ರಣ್ಣ ಕಿನ್ನಿಗೋಳಿ, ಎಡಪದವು ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ, ಅದ್ಯಪಾಡಿ-ಮೂಡುಶೆಡ್ಡೆ ಶ್ರೀನಿಲಕಂಠ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ಭಂಡಾರಿ, ಹೈಕೋರ್ಟ್ ವಕೀಲ ಐ.ತಾರನಾಥ ಪೂಜಾರಿ, ವಕೀಲರಾದ ಶರತ್ ಶೆಟ್ಟಿ, ಚೇತನ್ವರ್ಮ ಮುಖ್ಯ ಅತಿಥಿಗಳಾಗಿರುವರು. ಬಿ.ಸದಾಶಿವ ರಾವ್ ಬೋಲ್ಡೆ, ರುಕ್ಕಯ್ಯ ಶೆಟ್ಟಿ ಕುತ್ಯಾಡಿ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಕಿನ್ನಿಗೋಳಿ ಸ್ವರಾಂಜಲಿ ಸಂಗೀತ ಶಾಲೆಯ ಎಸ್. ಶೋಭಿತಾ ಭಟ್, ಅಶ್ವಿಜ ಉಡುಪ ಅವರಿಂದ ಕರ್ನಾಟಕ ಶ್ರಾಸ್ತ್ರೀಯ ಭಕ್ತಿ ಸಂಗೀತ ನಡೆಯಲಿದೆ. ಬಳಿಕ ನಿವೇದಿತಾ ಬಳಗದಿಂದ ಭಕ್ತಿ ವೈಭವ, ನೃತ್ಯ ಕಾರ್ಯಕ್ರಮವಿದೆ.
ಬ್ರಹ್ಮಕಲಶಾಭಿಷೇಕ:
ಏ.29ರಂದು ಬೆಳಿಗ್ಗೆ 9.05ರ ವೃಷಭ ಲಗ್ನ ಸುಮೂಹೂರ್ತದಲ್ಲಿ ಶ್ರೀ ದೇವಿಗೆ ಸಹಸ್ರಕಲಶ ಸಹಿತ ಬ್ರಹ್ಮಕಲಶಾಭಿಷೇಕವು ನಡೆಯಲಿದೆ. ಬೆಳಗ್ಗೆ 10ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥರು, ಆಶೀರ್ವಚನ ನೀಡಲಿದ್ದು ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ಸಭೆ ಜರಗಲಿದೆ. ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ರಾಮಚಂದ್ರ ಮಿಜಾರು, ಉದ್ಯಮಿ ಭಾಸ್ಕರ ಎಸ್.ಕೋಟ್ಯಾನ್ ಅತಿಥಿಗಳಾಗಿರುವರು. ಸಂತೋಷ್ ಶೆಟ್ಟಿ ಜಾರ್ಕಳ ನಡಿಕೆರೆಗುತ್ತು, ಬಾಡ ಪೂಜಾರಿ, ಪಾಣಿಲ, ಬೇಬಿ ಸಂಜೀವ ಶೆಟ್ಟಿ, ಮಾರ್ಕ್ಪಿಂಟೋ, ಸುಂದರಿ ಪೂಜಾರಿ ತ್ಯಾಂಪೆಟ್ಟು ಅವರನ್ನು ಸನ್ಮಾನಿಸಲಾಗುವುದು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿಂದ್ಯಾ ವೇಣೂರು ಹಾಗೂ ವೀಕ್ಷಿತಾ ಡಿ.ವೇಣೂರು ಅವರಿಂದ ಭರತನಾಟ್ಯ ಕಾರ್ಯಕ್ರಮ, ಮೂಲ್ಕಿ ನವ ವೈಭವ ತಂಡದಿಂದ ತುಳುನಾಡ ವೈಭವ ನಡೆಯಲಿದೆ .
