ಬಂಟ್ವಾಳ :   ಲೋಕಕಲ್ಯಾಣಾರ್ಥವಾಗಿ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ  ಪೆರಿಯೋಡಿಬೀಡಿನ ಬಾಕಿಮಾರುಗದ್ದೆಯಲ್ಲಿ ಎ.7 ರಂದು ಕಶೆಕೋಡಿ ಸೂರ್ಯ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಶ್ರೀ ರಾಮನಾಮತಾರಕ ಜಪ ಯಜ್ಙ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ತೇವು ತಾರನಾಥ ಕೊಟ್ಟಾರಿ ತಿಳಿಸಿದ್ದಾರೆ.     ಗುರುವಾರ ಸಂಜೆ ಕಳ್ಳಿಗೆ ಗ್ರಾಮದ ಪೆರಿಯೋಡಿ ಬೀಡಿನ ಬಾಕಿಮಾರು ಗದ್ದೆಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ  ಮಾತನಾಡಿದ ಅವರು, ಕಳ್ಳಿಗೆ, ತುಂಬೆ,ಪುದು,ಕೊಡ್ಮಾಣ್,ಮೇರಮಜಲು ಈ
೫ ಗ್ರಾಮವನ್ನೊಳಗೊಂಡು ಶ್ರೀ ರಾಮನಾಮತಾರಕ ಜಪಯಜ್ಙ ವನ್ನು ಆಯೋಜಿಸಲಾಗಿದೆ.ಪ್ರತಿ ಮೂರು ವರ್ಷಕ್ಕೊಮ್ಮೆ ಐದು ಗ್ರಾಮಗಳನ್ನು ಸೇರಿಸಿಕೊಂಡು ಈ ಕಾರ್ಯ ಕ್ರಮ ಆಯೋಜಿಸಲಾಗುತ್ತಿದೆ  ಎಂದರು. ಈ ಯಾಗದಲ್ಲಿ 5 ಗ್ರಾಮಗಳ ಪರಿಸರದ ಪ್ರತಿಯೊಂದು ಹಿಂದುಗಳು ತಮ್ಮ ಮನೆಗಳಲ್ಲಿ ೨೧ ದಿನಗಳಲ್ಲಿ ರಾಮನಾಮತಾರಕ ಜಪನಡೆಸಿ ಒಟ್ಟು ಕೋಟಿ ಜಪಮಾಡುವ ಸಂಕಲ್ಪ ಮಾಡಿದ್ದು,  ಈಗಾಗಲೇ ನೋಂದಣಿಯಾಗಿರುವ 432 ಕುಟುಂಬಗಳಿಗೆ 4 ಅವೃತ್ತಿಯಲ್ಲಿ ಯಜ್ಙಕ್ಕೆ ಹವಿಸ್ಸು ಸಮರ್ಪಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು. ಒಳ್ಳೆಯ ಸಂಸ್ಕಾರವನ್ನು ನೀಡಬೇಕು, ಧಾರ್ಮಿಕ ಮನೋಭಾವವನ್ನು ಬೆಳೆಸಬೇಕು, ಲೋಕಹಿತಕ್ಕೋಸ್ಕರ ನಾವೇನಾದರೂ ಮಾಡಬೇಕೆಂಬ ಮನೋಭಾವ ಮೂಡಿಸಬೇಕೆಂಬ ಉದ್ದೇಶದೊಂದಿಗೆ ಶ್ರೀ ರಾಮ ನಾಮ ತಾರಕ ಜಪ ಯಜ್ಞ  ನಡೆಸಲಾಗುತ್ತಿದೆ ಎಂದ ಅವರು, ಈಗಾಗಲೇ ಸುತ್ತಲಿನ ಗ್ರಾಮಗಳಲ್ಲಿ ವಿವಾಹ ಸಮಾರಂಭದಲ್ಲಿ ಸಂಸ್ಕಾರಯುತವಾದ ಬದಲಾವಣೆಗಳು ಕಂಡಿದೆ ಎಂದರು.

IMG_1853

ಸುಮಾರು ೩೬೦೦ ಚದರ ಅಡಿಯ ವಿಸ್ತೀರ್ಣದ ಅಂತರ ಚಪ್ಪರದ ಸಂಪ್ರಾದಾಯಿಕ ಯಜ್ಞ ಮಂಟಪ, ದಶಾವತಾರ ನೆನಪಿಸುವ ೧೦ ಯಜ್ಞ ಕುಂಡಗಳು, ೪೩೨ ಮಂದು ಯಜ್ಞೆ ದೀಕ್ಷಿತರಿಂದ ವೈದಿಕ ಸಹಕಾರದೊಂದಿಗೆ ಯಜ್ಞ ಸಂಪನ್ನ,, ೨೪೦೦ ಮಂದಿ ನಾಮಜಪ ಸೇವಾಕಾರ್ಯಕರ್ತರ ಭಾಗವಹಿಸುವಿಕೆ ಸುಮಾರು ಏಳು ಸಾವಿರ ರಾಮಭಕ್ತರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದ್ದು, ಒಂದು ಎಕರೆ ಪ್ರದೇಶದಲ್ಲಿ ಸಭಾಂಗಣ, ಊಟೋಪಚಾರ , ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಫರಂಗಿಪೇಟೆ ವರದೇಶ್ವರ ದೇವಸ್ಥಾನದಿಂದ ಕಳ್ಳಿಗೆ ಬೀಡುವಿಗೆ ಹಸಿರುಹೊರೆಕಾಣಿಕೆ ಸಮರ್ಪಣೆಯ ಶೋಭಾಯಾತ್ರೆಯು ಎ. 5  ಶುಕ್ರವಾರ ದಂದು ಸಂಜೆ 4 ಗಂಟೆಗೆ ಹೊರಡಲಿದೆ ಎಂದರು.ಎ.6 ರಂದು ಯುಗಾದಿಯ ಪ್ರಯುಕ್ತ 5 ಗ್ರಾಮಗಳಲ್ಲಿ ವಿಶೇಷ ಸಾಮೂಹಿಕ ರಾಮನಾಮಜಪ,ಸಂಜೆ ವೈಧಿಕ ಕಾರ್ಯಕ್ರಮ ನಡೆಯುವುದು,ಎ.7 ರಂದು ಬೆಳಿಗ್ಗೆ ಯಜ್ಞಾರಂಭ, ಪೂರ್ಣಾಹುತಿ, ಮಂಗಳಾರತಿ ನಂತರ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸುಧರ್ಮ ಸಭೆಯಲ್ಲಿಆಧ್ಯಾತ್ಮಿಕ ಚಿಂತಕ ಹಿರಣ್ಯ ವೆಂಕಟೇಶ್ ಭಟ್ ಶ್ರೀ ರಾಮ ಪಥದರ್ಶನದ ಮಾಡಲಿದ್ದಾರೆ. ಮಧ್ಯಾಹ್ನ  ಅನ್ನಸಂತರ್ಪಣೆಯ ನಂತರ ಪುತ್ತೂರು ಜಗದೀಶ್ ಆಚಾರ್ಯರವರಿಂದ ಭಕ್ತಿಗಾನ ವೈಭವ ನಡೆಯಲಿದೆ ಎಂದರು.

IMG_1851

By Suddi9

Leave a Reply

Your email address will not be published. Required fields are marked *