ಕೈಕಂಬ: ಕಂಬಳ ಉಳಿಸಲು ಹಲವಾರು ಮಂದಿ ಪ್ರಯತ್ನಿಸಿದ್ದಾರೆ. ಈ ಪೈಕಿ ನವೀನ್‍ಚಂದ್ರ ಆಳ್ವರೂ ಕೂಡ ಮುಂಚೂಣಿಯಲ್ಲಿ ಹೋರಾಟ ನಡೆಸಿದ್ದಾರೆ. ಇಂತಹಾ ಕಂಬಳವನ್ನು ಮುಂದೆಯೂ ಉಳಿಸೋಣ. ಈ ದೇಶಕ್ಕೆ ಸೈನಿಕರು ಎಷ್ಟು ಮುಖ್ಯವೋ ರೈತರೂ ಅಷ್ಟೇ ಮುಖ್ಯ. ದೇಶಕ್ಕಾಗಿ ಬಲಿದಾನಗೈದ ಸೈನಿಕರನ್ನು ನೆನೆಯೋಣ ಎಂದು ಯುವ ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ, ತಿರುವೈಲು ಗುತ್ತು ಕಂಬಳ ಸಮಿತಿಯ ಗೌರವ ಅಧ್ಯಕ್ಷರಾದ ಮಿಥುನ್ ರೈ ಹೇಳಿದರು.

ಅವರು ವಾಮಂಜೂರಿನ ತಿರುವೈಲುಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳ ಸಮಿತಿ(ರಿ) ವತಿಯಿಂದ ಶನಿವಾರ ಪೂರ್ವಾಹ್ನ ತಿರುವೈಲು ಶ್ರೀಅಮೃತೇಶ್ವರ ದೇವಸ್ಥಾನದ ಎದುರಿನ ಕಂಬಳ ಗದ್ದೆಯಲ್ಲಿ ನಡೆದ ತುಳುನಾಡಿನ ಕಂಬಳ-ತಿರುವೈಲೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕಂಬಳ ಉಳಿಸಲು ಸಾಕಷ್ಟು ಮಂದಿ ಹೋರಾಟ ನಡೆಸಿದ್ದು, ಇದರ ಫಲವಾಗಿ ತುಳುನಾಡಿನ ನಾನಾ ಭಾಗಗಳಲ್ಲಿ ಕಂಬಳವು ಯಶಸ್ವಿಯಾಗಿ ನಡೆಯುತ್ತಿದೆ. ಕಂಬಳದ ಕೋಣಗಳಿಗೆ ಹಿಂಸೆ ನೀಡದೆ ಓಡಿಸೋಣ ಎಂದು ವಿಹಿಂಪ ಮುಖಂಡ ಜಗದೀಶ್ ಶೇಣವ ಹೇಳಿದ್ದಾರೆ.ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ಧಪೀಠ ಇದರ ಶ್ರೀಪ್ರವೀಣ್ ರಾಜ್ ಮಚ್ಚೇಂದ್ರನಾಥ ಬಾಬಾ ಅವರು ದೀಪಪ್ರಜ್ವಲನೆಯ ಮೂಲಕ ಕಂಬಳ ಉದ್ಘಾಟಿಸಿ ಶುಭಾಶೀರ್ವಾಗೈದರು.
ಮಾಜಿ ಶಾಸಕ ಮೊಯ್ದೀನ್ ಬಾವಾ ಮಾತಾಡಿ, ಕಂಬಳ ತುಳುನಾಡಿನ ಹೆಮ್ಮೆಯ ಕ್ರೀಡೆಯಾಗಿದ್ದು, ಇದಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕಾಗಿದೆ ಎಂದರು. ತಿರುವೈಲುಗುತ್ತು ಕಂಬಳ ಸ್ಥಾಪಕರು-ಕಂಬಳದ ಅಧ್ಯಕ್ಷರಾದ ನವೀನ್ ಚಂದ್ರ ಆಳ್ವ ಶುಭಹಾರೈಸಿದರು. ಬಂಟರ ಯಾನೆ ನಾಡವರ ಮಾತೃಸಂಘ ದ.ಕ ಇದರ ಅಧ್ಯಕ್ಷರಾದ ಮಾಲಾಡಿ ಅಜಿತ್ ಕುಮಾರ್ ರೈ, ಜಯರಾಮ ಸಾಮಾನಿ ತುಂಬೆ, ಶ್ರೀಜಾಣು ಶೆಟ್ಟಿ ಮೆಮೊರಿಯಲ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ತಿರುವೈಲು ಸ್ಥಾಪಕಾಧ್ಯಕ್ಷರಾದ ಸೀತಾರಾಮ ಜಾಣು ಶೆಟ್ಟಿ, ಕಲ್ಲುಡೇಲು ಶ್ರೀಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕ ಸದಾಶಿವ ಭಟ್, ರಾಜ್ ಟೈಲ್ ಪರಾರಿ ಇದರ ರವಿರಾಜ್ ಶೆಟ್ಟಿ, ಕೋರ್ದಬ್ಬು ದೇವಸ್ಥಾನ ಪರಾರಿ ಅಧ್ಯಕ್ಷ ಶೇಖರ್ ಶೆಟ್ಟಿ ಕೊಳಕೆಬೈಲು, ನಿತಿನ್ ಎಂಟರ್‍ಪ್ರೈಸಸ್ ಕಾವೂರಿನ ನಿತಿನ್ ಶೆಟ್ಟಿ ಪಾದೂರು ಹೊಸಮನೆ, ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗರಾಜ್ ರೈ ತಿಮಿರಿಗುತ್ತು, ಉಮೇಶ್ ರೈ ಪದವು ಮೇಗಿನ ಮನೆ, ತಾರ್ದೊಲ್ಯ ತರವಾಡು ಮನೆ ಜಪ್ಪಿನಮೊಗರಿನ ಯಜಮಾನರಾದ ಯು. ಕರುಣಾಕರ ಶೆಟ್ಟಿ. ಮಾಜಿ ಕಾರ್ಪೊರೇಟರ್ ಮೀರಾ ಅಶೋಕ್, ಪ್ರತೋಷ್ ಮಲ್ಲಿ ತಿರುವೈಲು, ಓಂಪ್ರಕಾಶ್ ಶೆಟ್ಟಿ ವಾಮಂಜೂರು, ಕಂಬಳದ ಕಾರ್ಯಾಧ್ಯಕ್ಷ ಪ್ರವೀಣ್ ಚಂದ್ರ ಆಳ್ವ ತಿರುವೈಲುಗುತ್ತು, ಕೋಶದಿಕಾರಿ ರಾಜ್‍ಕುಮಾರ್ ಶೆಟ್ಟಿ, ಪ್ರ.ಕಾರ್ಯದರ್ಶಿ ಕೆ. ಅಭಿಷೇಕ್ ಆಳ್ವ, ಚಂದ್ರಹಾಸ ರೈ, ಗಂಗಯ್ಯ ಅಮೀನ್, ಕಾಪೆಟ್ಟುಗುತ್ತು ಸುರೇಶ್ ಶೆಟ್ಟಿ ಹಾಗೂ ಚಂದ್ರಶೇಖರ ಶೆಟ್ಟಿ, ಅಪ್ಪಣಬೆಟ್ಟು ರಾಜು, ಕಿಂಞಣ್ಣ ಶೆಟ್ಟಿ, ಶುಭಾಷ್ ರೈ, ಸದಾಶಿವ ಶೆಟ್ಟಿ ಮುಂತಾವದರು ಉಪಸ್ಥಿತರಿದ್ದರು. ಅಶ್ವಿನ್ ಶೆಟ್ಟಿ ಬೊಂಡಂತಿಲ ಸ್ವಾಗತಿಸಿ-ನಿರೂಪಿಸಿ-ಧನ್ಯವಾದಗೈದರು. ಜಿಲ್ಲೆಯ ನಾನಾ ಭಾಗಗಳಿಂದ ಕೋಣಗಳು ಆಗಮಿಸಿವೆ. ಕೋಣಗಳನ್ನು ಕೊಂಬು-ಕಹಳೆ, ಚೆಂಡೆವಾದನ, ಬ್ಯಾಂಡ್ ವಾದ್ಯಗಳ ಮೂಲಕ ಸ್ವಾಗತಿಸಲಾಯಿತು. ಕನೆಹಲಗೆ, ಹಗ್ಗ ವಿಭಾಗ, ನೇಗಿಲು ವಿಭಾಗ, ಅಡ್ಡ ಹಲಗೆ ಹೀಗೆ ನಾಲ್ಕು ವಿಭಾಗಗಳಲ್ಲಿ ಕಂಬಳ ನಡೆಯುತ್ತಿದೆ.
