ಗುರುಪುರ: ಗುರುಪುರದ ಗೋಳಿದಡಿಗುತ್ತಿನ ವರ್ಧಮಾನ ದುರ್ಗಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ `ಗುತ್ತುದ ವರ್ಸೊದ ಪರ್ಬೊ’ ಜ.19 ಹಾಗೂ ಜ.20ರಂದು ಗೋಳಿದಡಿಗುತ್ತಿನಲ್ಲಿ ನಡೆಯಲಿದೆ. ಜ.19ರ ಪ್ರಾತಕಾಲ 6.30ರಿಂದ ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್. ನಿತ್ಯಾನಂದ ಅವರ ಮಾರ್ಗದರ್ಶನದಲ್ಲಿ ಫಲ್ಗುನಿ ನದಿ ತಟಕಾದ ಶ್ರೀಮಹಾಕಾಲೇಶ್ವರ ಪ್ರಾಂಗಣದಲ್ಲಿ ಶ್ರೀರುದ್ರ ಹೋಮವು ಆರಂಭಗೊಂಡು ಬೆಳಿಗ್ಗೆ 10ಕ್ಕೆ ಪೂರ್ಣಾಹುತಿಯೊಂದಿಗೆ ಸಂಪನ್ನಗೊಳ್ಳಲಿದೆ. ಅಂದು 9.30ಕ್ಕೆ ಪಾರಂಪರಿಕ ಶೈಲಿಯಲ್ಲಿ `ಪರ್ಬೊದ ಸಿರಿ’ಯ ಉದ್ಘಾಟನೆ, ಶ್ರೀಮಹಕಾಲೇಶ್ವರ ವೇದಿಕೆಯಲ್ಲಿ `ಗುತ್ತು ನಿಮಗೆಷ್ಟು ಗೊತ್ತು?’ ಎನ್ನುವ ಗುತ್ತು-ಬೀಡು-ಬಾವ-ಬಾರಿಕೆ(ಬರ್ಕೆ) ಮತ್ತು ಪರಡಿ ಮನೆತನಗಳ ಸತ್ಯ, ನ್ಯಾಯ, ಧರ್ಮಬದ್ಧವಾದ ದೈವಿಕ ತಳಹದಿಯ ಪ್ರಾಚೀನ ಭಾರತದ ಆಡಳಿತ ವ್ಯವಸ್ಥೆಯ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ.

guthina mane

 

ಜ.19ರ ಶನಿವಾರ ಶ್ರೀವೈದ್ಯನಾಥೇಶ್ವರ ವೇದಿಕೆಯಲ್ಲಿ ಸಂಜೆ 6 ಗಂಟೆಗೆ ಗುತ್ತಿನ ವರ್ಷದ ಒಡ್ಡೋಲಗ ನಡೆಯಲಿದ್ದು, ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ಪೂಜ್ಯ ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್. ನಿತ್ಯಾನಂದ ಅವರು ಭಾಗವಹಿಸಲಿದ್ದಾರೆ. ಪಡುಬಿದ್ರಿ ಬೀಡಿನ ಅರಸರಾದ ರತ್ನಾಕರರಾಜ ಅರಸು ಕಿನ್ಯಕ್ಕ ಬಳ್ಳಾಲರು ದೀಪಪ್ರಜ್ವಲನೆ ನಡೆಸಲಿದ್ದಾರೆ. ಅಂದು ರಾತ್ರಿ 7ರಿಂದ ಶ್ರೀ ವೈದ್ಯನಾಥೇಶ್ವರ ವೇದಿಕೆಯಲ್ಲಿ ಸನಾ ಜಾನಪದ ಕಲಾಕೇಂದ್ರ ಶಿರ್ವ ಇವರಿಂದ ನೃತ್ಯ-ಸಂಗೀತ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ರಂಗಸುದರ್ಶನ(ರಿ) ಸಸಿಹಿತ್ಲು ಇವರಿಂದ ಕಾಂತಬಾರೆ ಬೂದಬಾರೆ ತುಳು ಗೀತಾನಾಟಕ ಜರುಗಲಿದೆ.
ಜ.20ರ ಬೆಳಿಗ್ಗೆ 11ಕ್ಕೆ ಗುರುಪುರ ಫಲ್ಗುಣಿ ನದಿ ತಟಕಾದಲ್ಲಿ ಪುನರ್‍ನಿರ್ಮಾಣಗೊಳ್ಳಲಿರುವ ಶ್ರೀ ಮಹಾಕಾಲೇಶ್ವರ ದೇವಸ್ಥಾನಕ್ಕೆ ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್. ನಿತ್ಯಾನಂದ ಅವರಿಂದ ತುಲಾಭಾರ ಪ್ರತಿಷ್ಠೆ ನಡೆಯಲಿದೆ. ಅಂದು ಸಂಜೆ 6ಕ್ಕೆ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ಸನಾತನ ನೃತ್ಯಾಂಜಲಿ ಭರತನಾಟ್ಯ ನೃತ್ಯ ವೈವಿಧ್ಯ ಜರುಗಲಿದೆ. ಸಂಜೆ 8.15ರಿಂದ ದ.ಭಾರತದ ಮಹಮ್ಮದ್ ರಫಿ ಎಂದೇ ಖ್ಯಾತರಾದ ಠಾಗೋರ್ ದಾಸ್ ಇವರಿಂದ ಏಕ್ ಶ್ಯಾಮ್- ರಫಿ ಔರ್ ಕಿಶೋರ್ ಕಿ ನಾಮ್ ಮಹಮ್ಮದ್ ರಫಿ ಮತ್ತು ಕಿಶೋರ್ ಕುಮಾರ್ ರವರ ಕಂಠಸಿರಿಯಲ್ಲಿ ಗಣೇಶ್ ಕುಮಾರ್ ಕೇರಳ ಅವರಿಂದ ಹಾಡುಗಳ ಗಾಯನ ಜರಗಲಿದೆ.
ವಿಚಾರಗೋಷ್ಠಿಯಲ್ಲಿ ಉಪಸ್ಥಿತರಿರುವ ಗುತ್ತು, ಬೀಡು, ಬಾರಿಕೆ(ಬರ್ಕೆ), ಬಾವ, ಪರಡಿ ಮನೆತನಗಳ ಗಡಿಕಾರರು, ಮುಕ್ಕಾಲ್ದಿಗಳು, ಪ್ರತಿನಿಗಳಿಗೆ ಗೌರವ ಸಮರ್ಪಣೆ ನಡೆಯಲಿದೆ. ಮಂಡಿಸಿದ ವಿಚಾರಕ್ಕೆ ಸಂಬಂದಿಸಿ ಹಾಗೂ ಮಂಡಿಸಿದ ವಿಭಿನ್ನ ದೃಷಿಕೋನಕ್ಕೆ ಸಂಬಂದಿಸಿ ಪ್ರಶ್ನೋತ್ತರ, ಗುತ್ತು-ಬೀಡು-ಗಾಥೆಗಳ ಕುರಿತು ಸುಗಮ ಸಂಗೀತ, ಗುತ್ತುದ ಚಾವಡಿದ ಅಳಿಯಕಟ್ಟು ತುಳುರೂಪಕ ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿದೆ.

By Suddi9

Leave a Reply

Your email address will not be published. Required fields are marked *