ಬಂಟ್ವಾಳ: ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಮಂಗಳೂರು, ಕೇಂದ್ರ ವಾರ್ತ ಮತ್ತು ಪ್ರಸಾರ ಸಚಿವಾಲಯ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ,ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ,ಸಜೀಪ ಮೂಡ ಗ್ರಾ.ಪಂ. ಇವರ ಸಂಯುಕ್ತ ಆಶ್ರಯ ದಲ್ಲಿ ” ಆಯುಷ್ಮಾನ್ ಭಾರತ” ಮತ್ತು ” ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಿ” ವಿಶೇಷ ಕಾರ್ಯಕ್ರಮ ಸಜೀಪ ಮೂಡ ಬ್ರಹ್ಮ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆಯಿತು.ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಬೆಳ್ಚಾಡ ಕಾರ್ಯಕ್ರಮ ಉದ್ಘಾಟಿಸಿದರು.1 (1)

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸುಂದರ ಪೂಜಾರಿ ಮಾತನಾಡಿ ಆಯುಷ್ಯ ವನ್ನು ಹೆಚ್ಚು ಮಾಡಲು ಸರಕಾರದ ಬಹು ಉಪಯುಕ್ತ ಮಾಹಿತಿ ಯನ್ನು ನೀಡುವ ಕಾರ್ಯಕ್ರಮ . ಹಾಗೂ ಹೆಣ್ಣು ಮಕ್ಕಳನ್ನು ರಕ್ಷಣೆ ಗಾಗಿ ವಿಶೇಷ ಮುತುವರ್ಜಿಯಿಂದ ಕೇಂದ್ರ ಸರಕಾರ ಯೋಜನೆ ಗಳನ್ನು ಕಾರ್ಯರೂಪಕ್ಕ ತಂದಿದೆ. ಇಂತಹ ಕಾರ್ಯ ಕ್ರಮದ ಅರಿವನ್ನು ಪ್ರತಿಯೊಬ್ಬರಿಗೆ ತಲುಪಿಸಲು ಕಾರ್ಯಕ್ರಮ ಸರಕಾರ ಆಯೋಜಿಸಿದೆ, ಮಹಿಳೆಯರುಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು. ಕಾರ್ಯಕ್ರಮ ದಲ್ಲಿ ಜನಸಂಪರ್ಕ ಕಾರ್ಯಾಲಯ ದ ಜಿಲ್ಲಾ ಸಂಪರ್ಕಾಧಿಕಾರಿ ಜಗನ್ನಾಥ, ಮಾತನಾಡಿ ಸಾಂಕ್ರಮಿಕ ರೋಗ ಮತ್ತು ಸಾಂಕ್ರಾಮಿಕ ರೋಗ ವಲ್ಲದ ಕಾಯಿಲೆ ಗಳಿಂದ ಇಂದು ಬಹುತೇಕ ಜನ ಸಮಸ್ಯೆ ಯಿಂದ ಬಳಲುತ್ತಿದ್ದಾರೆ. ಹಾಗಾಗಿ ಸಾರ್ವತ್ರಿಕ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಭಾರತ್ ಈ ಯೋಜನೆ ಕೇಂದ್ರ ಸರಕಾರ ಜಾರಿಗೆ ತಂದಿದೆ. ಈ ಎಲ್ಲಾ ವ್ಯವಸ್ಥೆ ಯಡಿಯಲ್ಲಿ ಫಲಾನುಭವಿಗಳು ಸೌಲಭ್ಯ ಪಡೆಯಲು ತಿಳಿಸಿದರು. ‌

ಬಿ.ಪಿ.ಎಲ್ ಮತ್ತು ಅಂತ್ಯೋದಯ ಕಾರ್ಡು ದಾರರಿಗೆ 5 ಲಕ್ಷ ಹಾಗೂ ಎ.ಪಿ.ಎಲ್ ಕಾರ್ಡ್ ದಾರರಿಗೆ 1.50 ಲಕ್ಷ ಸೌಲಭ್ಯ ವನ್ನು ಈ ಆಯುಷ್ಮಾನ್ ಭಾರತ್ ಯೋಜನೆ ಯಲ್ಲಿ ನೀಡಲಾಗಿದೆ.‌
ಇದರ ಜೊತೆಗೆಬೇರೆ ಬೇರೆ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಗಳಿವೆ, ಈ ಬಗ್ಗೆ ಸ್ಥಳೀಯ ಸರಕಾರಿ ಆಸ್ಪತ್ರೆಗಳಲ್ಲಿ ಮಾಹಿತಿ ಪಡೆಯಲು ತಿಳಿಸಿದರು.
ಅಥವಾ 18004258330ಈ ಮೊಬೈಲ್ ನಂ. ಮೂಲಕ ಮಾಹಿತಿ ಪಡೆಯಲು ಸಾಧ್ಯ ವಿದೆ.

ವೇದಿಕೆಯಲ್ಲಿ
ಗ್ರಾ.ಪಂ.ಸದಸ್ಯ ರು ಗಳಾದ ಯಮುನಾ, ಸರಸ್ವತಿ, ಹರಿಣಾಕ್ಷೀ, ಹೇಮಾವತಿ, ಸಮೀಮಾ, ಸೀತಾರಾಮ,
ಬಂಟ್ವಾಳ ಸಿ.ಡಿ.ಪಿ.ಒ. ಮಲ್ಲಿಕಾ, ಕ್ಷೇತ್ರ ಪ್ರಚಾರ ಅಧಿಕಾರಿ ತುಕರಾಮ ಗೌಡ,
ಹಿರಿಯ ಮೇಲ್ಬಿಚಾರಕಿ ಭಾರತಿ, ಮೇಲ್ವಿಚಾರಕಿಯರಾದ ಸವಿತಾ, ಸಿಂಧು ಜನಸಂಪರ್ಕ ಕಾರ್ಯಾಲಯದ ಸಿಬ್ಬಂದಿ ನವೀನ್ , ಸಜೀಪ ಮೂಡ ಪಿ.ಡಿ.ಒ.ನಿರ್ಮಲ, ಅಂನವಾಡಿ ಕಾರ್ಯಕರ್ತರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು
ಉಪಸ್ಥಿತರಿದ್ದರು. ‌

ಕಾರ್ಯಕ್ರಮದ ಆರಂಭದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಸುಭಾಷ್ ನಗರ ದಿಂದ ಕಲ್ಯಾಣ ಮಂಟಪ ದವರೆಗೆ ಮಹಿಳೆಯರು ಮೆರವಣಿಗೆ ಮೂಲಕ ಸಾಗಿಬಂದರು.

ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ದ ಪ್ರಚಾರ ಅಧಿಕಾರಿ ತುಕರಾಮ ಗೌಡ ಪ್ರಸ್ತಾವಿಕವಾಗಿ ಮಾತನಾಡಿ ದರು.‌
ಜನಸಂಪರ್ಕ ಕಾರ್ಯಾಲಯದ ಸಿಬ್ಬಂದಿ ರೋಹಿತ್ ಸ್ವಾಗತಿಸಿದರು.
ಮೇಲ್ಬಿಚಾರಕಿ ಸವಿತಾ ವಂದಿಸಿದರು.
ಹಿರಿಯ ಮೇಲ್ಬಿಚಾರಕಿ ಭಾರತಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ದ ಬಳಿಕ ಕಾರ್ಯಕರ್ತೆಯರಿಗೆ ಈ ಕಾರ್ಯಕ್ರಮದ ಯೋಜನೆಯ ಬಗ್ಗೆ ರಸಪ್ರಶ್ನೆಯನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು. ‌

Attachments area

By Suddi9

Leave a Reply

Your email address will not be published. Required fields are marked *