ಮೂಡುಬಿದಿರೆ: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಪರಿಶ್ರಮದಿಂದ ಉನ್ನತ ಹಂತಕ್ಕೇರಲು ಸಾಧ್ಯ. ಆಯ್ಕೆ ಹಾಗೂ ಅವಕಾಶಗಳು ನಮ್ಮ ಕೈಯಲ್ಲೇ ಇವೆ.ಅದನ್ನು ಸರಿಯಾದ ರೀತಿಯಲ್ಲಿ ,ಸರಿಯಾದ ಕ್ರಮದಲ್ಲಿ ಯೋಜಿಸಿದರೆ ಖಂಡಿತವಾಗಿಯೂ ನಾವು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ ಎಂದು ನ್ಯಾಯವಾದಿ ಪಿ .ಪಿ. ಹೆಗ್ಡೆ  ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

clg day (1)

ನಮ್ಮ ದೇಶವು ಮೊದಲು ,ನನ್ನಿಂದಲೇ ಬದಲಾವಣೆ ಆಗಲಿ. ದೇಶಕ್ಕೆ ಉತ್ತಮವಾದ ಭವಿಷ್ಯ ಸಿಗಬೇಕಾದರೆ ಯುವಕರಾದ ತಾವು ಮೊದಲು ಚರಿತ್ರ್ಯವಂತರಾಗಬೇಕು.ದೇಶ ಸುಸ್ಥಿರವಾಗಲು ಯುವಜನಾಂಗ ಎಚ್ಚೆತ್ತುಕೊಳ್ಳಬೇಕಾಗಿದೆ.ಮುಂದಿನ ಹತ್ತು ವರ್ಷಗಳಲ್ಲಿ ಭಾರತ ವಿಶ್ವದ ನಾಯಕತ್ವ ವಹಿಸಲಿದೆ ಎಂದು ತಿಳಿಸಿದರು. ವೇದಜ್ಞಾನ ,ಮುನಿಗಳ ,ಮಹಾತ್ಮರ ಪರಂಪರೆ ನಮಗಿದೆ.ಜಗತ್ತಿಗೆ ಎಲ್ಲವನ್ನೂ ಕಲಿಸಿಕೊಟ್ಟವರು ನಾವು..ಆದ್ದರಿಂದ ಭಾರತೀಯನೆಂದು ಹೆಮ್ಮೆಯಿಂದ ಹೇಳಿಕೊಳ್ಳೋಣ ,ಜಗತ್ತಿನ ಯಾವ ದೇಶಗಳಿಗೂ ನಾವು ಕಡಿಮೆಯಿಲ್ಲ ಎಂಬುದನ್ನು ಸಾಧಿಸಿ ತೊರಿಸೋಣ ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕುವೆಂಪು ವಿದ್ಯಾನಿಕೇತನ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ಶಂಕರ್ ಮಾತನಾಡಿ ನಿಮ್ಮೊಳಗಿನ ಶಕ್ತಿಯನ್ನು ಉದ್ದೀಪನಗೊಳಿಸುವುದೇ ಶಿಕ್ಷಣದ ಉದ್ದೇಶ. ಆ ಶಕ್ತಿ ನಮ್ಮ ಅಂತರಾತ್ಮವನ್ನು ಶಕ್ತಿರೂಪದಲ್ಲಿ ಬಡಿದೆಬ್ಬಿಸಿದರೆ ಸಾಧನೆಗೆ ಹಾದಿಯಾಗುತ್ತದೆ ಎಂದು ಹೇಳಿದರು.
ಡಾ.ಶೀತಲ್ ಕುಮಾರ್ ನಾರಾವಿ ಮಾತನಾಡಿ, ದೇಶದಿಂದ ವ್ಯಕ್ತಿಯೇ ಹೊರತು ವ್ಯಕ್ತಿಯಿಂದ ದೇಶವಲ್ಲ ,ದೇಶವನ್ನು ಕಟ್ಟಬಲ್ಲ ಯುವಸಮೂಹ ನಮ್ಮ ದೇಶದಲ್ಲಿದೆ .ಹೀಗಾಗಿ ಯುವ ಜನರಲ್ಲಿ ಸರ್ವತೋಮುಖ ಅಭಿವೃದ್ಧಿ ಕಾಣುವಂತಾಗಲಿ ಎಂದು ಹಾರೈಸಿದರು.

clg day (2)
ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ತಮ್ಮ ಬಾಲ್ಯದಿಂದ ಇಂದಿನವರೆಗೂ ತಮಗೆ ಮಾರ್ಗದರ್ಶನ ನೀಡಿದ ಹಿರಿಯರನ್ನು ಸ್ಮರಿಸಿದರು.
ಬಳಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಮತ್ತು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗುರುಪ್ರಸಾದ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು.ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕ ವಿಕ್ರಮ್ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

By Suddi9

Leave a Reply

Your email address will not be published. Required fields are marked *