ಬಂಟ್ವಾಳ: ಭೌತಶಾಸ್ತ್ರ ವಿಭಾಗದ ಎಂ.ಎಸ್ಸಿ. ಯಲ್ಲಿ ಪ್ರಥಮ ರ್ಯಾಂಕ್ ಗಳಿಸಿ ದ ಕು| ಕಾವ್ಯ ಕೆ. ನಾಯಕ್ ಇವರು ಎರಡು ಚಿನ್ನದ ಪದಕಗಳೊಂದಿಗೆ ಪುರಸ್ಕಾರ ಪಡೆದರು. ಸುರತ್ಕಲ್ ಎನ್‍ಐಟಿಕೆಯಲ್ಲಿ ನಡೆದ 16ನೇ ಘಟಿಕೋತ್ಸವದ ಪದವಿ ಪ್ರಧಾನಸಮಾರಂಭದಲ್ಲಿ ಇದನ್ನು ಸ್ವೀಕರಿಸಿದರು.
ಶ್ರೀಮತಿ ರೂಪ ಮತ್ತು ಶ್ರೀ ಕೃಷ್ಣ ನಾಯಕ್, ತುಂಬೆ ಇವರ ಸುಪುತ್ರಿಯಾದ ಇವರು ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದು ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ.ಯಲ್ಲಿ ಪ್ರಥಮ ರ್ಯಾಂಕ್ ಪಡೆದಿರುತ್ತಾರೆ.

