ಮೂಡುಬಿದಿರೆ: ಹಿರಿಯ ಆಯುರ್ವೇದ ವೈದ್ಯ ಡಾ. ಐಕಳ ಬಾವ ಪದ್ಮನಾಭ ಶೆಟ್ಟಿ(87) ಅವರು ಅಲ್ಪಕಾಲದ ಅಸೌಖ್ಯದಿಂದ ನ. 11 ಭಾನುವಾರ ಬೆಳಿಗ್ಗೆ ಕಾಯರ್‍ಗುಂಡಿಯಲ್ಲಿನ ತಮ್ಮ ‘ಸಂಜೀವಿನಿ’ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ಅವರು ಪತ್ನಿಯನ್ನು ಅಗಲಿದ್ದಾರೆ. ಅವರು ಶೃಂಗೇರಿಯ ಕೊಪ್ಪ, ಬಿ.ಸಿ.ರೋಡ್, ನಾರಾವಿ ಬಳಿಕ ಮೂಡುಬಿದಿರೆ ಕಲ್ಲಬೆಟ್ಟು ಬಳಿಕ ಗಂಟಾಲ್ಕಟ್ಟೆಯ ಪಡ್ಡಂದಡ್ಕದಲ್ಲಿ ಸಂಜೀವಿನಿ ಕ್ಲೀನಿಕ್‍ನ ವೈದ್ಯರಾಗಿ ಕಳೆದ ಐದು ದಶಕಗಳಿಂದ ವೈದ್ಯಕೀಯ ಸೇವೆ ಸಲ್ಲಿಸಿದ್ದರು.

