ಬಂಟ್ವಾಳ: ತೇಜಸ್ವಿಯವರು ಪ್ರಧಾನವಾಗಿ ಜೀವನ ಮುಖಿಯಾದ ಹೊಸ ಸಾಹಿತ್ಯವನ್ನು ರೂಪಿಸುವುದರ ಕಡೆಗೆ ಸಾಗಿರುವುದನ್ನು ಕಾಣಬಹುದಾಗಿದೆ. ತೇಜಸ್ವಿಯವರ ಆದರ್ಶದ ಬದುಕು ಮತ್ತು ಬರವಣಿಗೆಗಳು ಜನ- ಸಾಮಾನ್ಯರನ್ನು ತಲುಪಿದೆ ಎಂದು ಸಂತ ಫಿಲೋಮಿನ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಮನ ಪ್ರಶಾಂತ್ ಹೇಳಿದರು.

ಬಂಟ್ವಾಳ ಶ್ರೀವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕೃಷ್ಣೇಗೌಡನ ಆನೆ ನೀಳ್ಗತೆಯ-ವಿಶ್ಲೇಷಣೆ ಕುರಿತು ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಶಶಿಕಲಾ ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವ್ಯವಸ್ಥೆ ಸರಿಯಾಗಿದ್ದಾಗ ನಾವು ಯಾರನ್ನೂ ದೂಷಿಸಬೇಕಾಗಿಲ್ಲ. ನಮ್ಮಲ್ಲಿರುವ ಲೋಪದೋಷಗಳನ್ನು ನಾವು ಸರಿಪಡಿಸಿಕೊಳ್ಳಬೇಕು. ನಮ್ಮ ಯೋಚನೆಗಳು ಪರಿಶುದ್ಧವಾಗಿರಬೇಕು ಎಂದು ಹೇಳಿದರು.
ಕನ್ನಡ ಸಂಘದ ನಿರ್ದೇಶಕರಾದ ಅಪರ್ಣ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿ ಕಾವ್ಯ ಸ್ವಾಗತಿಸಿ, ಧೀರೇಶ್ ಕುಮಾರ್ ವಂದಿಸಿದರು. ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
