ಮೂಡುಬಿದಿರೆ:ಸವಾಲುಗಳನ್ನು ಎದುರಿಸುವ, ಆತ್ಮಸ್ಥೈರ್ಯ ಬೆಳೆಸಿಕೊಳ್ಳುವ ಮೂಲಕ ಬದುಕುವ ವಿದ್ಯೆಯನನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ನಡ್ಯೋಡಿ ಕಿರಿಯ ಪ್ರಾಥಮಿಕ ಶಾಲೆ ಮಾರ್ಪಾಡಿ ಇಲ್ಲಿ ನಡೆಯುತ್ತಿರುವ ಜೈನ್ ಪದವಿ ಪೂರ್ವ ಕಾಲೇಜಿನ ಎನ್‍ಎಸ್‍ಎಸ್ ಶಿಬಿರದಲ್ಲಿ ಗುರುವಾರ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯೆ ಎಂದರೆ ಕೇವಲ ಅಂಕಗಳಿಸುವುದಕ್ಕೆ ಸೀಮಿತವಾಗದೆ ಜೀವನ ಕ್ರಮ ಹೇಗಿರಬೇಕೆಂಬ ಶಿಕ್ಷಣವು ಸಿಗಬೇಕು. ಈ ರೀತಿಯ ಶಿಕ್ಷಣ ಎನ್‍ಎಸ್‍ಎಸ್ ಶಿಬಿರಗಳಲ್ಲಿ ಸಿಗುತ್ತದೆ. ಇಂತಹ ಶಿಬಿರಗಳಲ್ಲಿ ಸಾಕಷ್ಟು ಅನುಭವಗಳನ್ನು ಪಡೆಯಬಹುದು. ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಿಬಿರಾಧಿಕಾರಿ ನವೀನ್ ಹೆಗ್ಡೆ, ಪ್ರಾಧ್ಯಾಪಕ ರಾಮಚಂದ್ರ ಭಟ್, ಪುರಸಭಾ ಸದಸ್ಯ ರಾಜೇಶ್ ಕೋಟೆಗಾರ್, ನಡ್ಯೋಡಿ ಶಾಲೆಯ ಸಲಹಾ ಸಮಿತಿ ಅಧ್ಯಕ್ಷ ಎಂ.ಪುರುಷೋತ್ತಮ ಶೆಟ್ಟಿ, ಸ್ಥಳೀಯರಾದ ದಿಲೀಪ್ ಶೆಟ್ಟಿ, ವಿಶ್ವನಾಥ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

