ಬಂಟ್ವಾಳ: ಸಂಸ್ಕೃತಿ ಸೇವಾ ಪ್ರತಿಷ್ಠಾನ ಕಳ್ಳಿಗೆ ಇದರ ಆಶ್ರಯದಲ್ಲಿ 17 ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಪೂಜಾ ಮಹೋತ್ಸವ ಬ್ರಹ್ಮರಕೂಟ್ಲು ದೇವಂದಬೆಟ್ಟಿವಿನ ಶ್ರೀ ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನದ ರಾಜಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.ಅಶ್ವಯುಜ ಶುದ್ದ ಅಷ್ಟಮಿಯ ದಿನವಾದ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕ್ಷೇತ್ರದ ದೇವರು ಶ್ರೀ ವಿಷ್ಣುಮೂರ್ತಿಗೆ ಮಧ್ಯಾಹ್ನದ ಮಹಾಪೂಜೆ ನಡೆದ ಬಳಿಕ ಶ್ರೀ ಶಾರದೆಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಪ್ರಸಾದ ವಿತರಣೆ ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸತ್ಸಂಗ ಸಮಿತಿ ಸಂಚಾಲಕ ವಾಸುದೇವ ಆರ್. ಕೊಟ್ಟಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನಮ್ಮ ಆತ್ಮದ ಉನ್ನತಿಗಾಗಿ ನಾವು ಧಾರ್ಮಿಕ ಕಾರ್ಯಗಳನ್ನು ಮಾಡಬೇಕು, ವಿಚಾರವನ್ನು ತಿಳಿದು ಆಚರಣೆಯನ್ನು ಮಾಡಬೇಕು ಎಂದರು. ಶಾರದೆ ಜ್ಞಾನದ ದೇವರು. ಶಾರದೆಯ ಅನುಗ್ರವಿದ್ದರೆ ಮಾತ್ರ ಲಕ್ಷ್ಮೀಯ ಆಶೀರ್ವಾದವನ್ನು ಪಡೆಯಬಹುದು ಎಂದ ಅವರು ಅಹಂಕಾರ ಬಿಟ್ಟು ಓಂಕಾರವನ್ನು ಹಿಡಿಯಬೇಕು ಎಂದು ತಿಳಿಸಿದರು. ಬಂಟ್ವಾಳ ತಾಲೂಕು ಕುಲಾಲ ಯುವ ವೇದಿಕೆಯ ಅಧ್ಯಕ್ಷ ಸುಕುಮಾರ್ ಮಾತನಾಡಿದರು.
ಸುಮಂಗಲ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ನಾರಾಯಣ ಸಪಲ್ಯ ಕಡೇಶ್ವಾಲ್ಯ, ಸಂಸ್ಕೃತಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪುರುಷ ಎನ್ ಸಾಲ್ಯಾನ್ ನೆತ್ತರಕೆರೆ, ಶಾರದ ಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷ ಮನೋಜ್ ಕನಪಾಡಿ, ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಶ್ರೀಶೈಲ, ಜನಾರ್ದನ ಸಾಲ್ಯಾನ್ ಮುಂಡಾಜೆ, ಕೌಸಲ್ಯ ಮಹಿಳಾ ವಿಶ್ವಸ್ಥ ಮಂಡಳಿಯ ಗೌರವಾಧ್ಯಕ್ಷೆ ಪುಷ್ಪ ಬಂಜನ್, ಸಂಚಾಲಕಿ ಶಶಿಪ್ರಭಾ, ಅಧ್ಯಕ್ಷೆ ಕವಿತಾ ಜಾರಂದಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ಗಣೇಶ ಜೆ.ಕರ್ಕೇರ ಸ್ವಾಗತಿಸಿದರು, ಪ್ರಶಾಂತ್ ಕುಲಾಲ್ ವಂದಿಸಿದರು, ಶಾರಾದ ಪೂಜಾ ಮಹೋತ್ಸವ ಪ್ರಧಾನ ಕಾರ್ಯದರ್ಶಿ ಮಹೇಶ್ ಚಂದ್ರಿಗೆ ಕಾರ್ಯಕ್ರಮ ನಿರೂಪಿಸಿದರು.
