ಮೂಡುಬಿದಿರೆ: ದೇಹಕ್ಕೆ ಪ್ರಾಣ ಮಹತ್ವದ್ದಾಗಿರುವಂತೆ ರಾಷ್ಟ್ರಕ್ಕೆ ಸಂಸ್ಕøತಿ ಅತೀ ಮುಖ್ಯವಾಗಿದೆ. ವಿದೇಶಿಗರು ವಸ್ತುಗಳಿಕೆಯ ಜೀವನಕ್ಕೆ ಒತ್ತು ನೀಡಿ ಮೌಲ್ಯಗಳನ್ನು ಕಳೆದುಕೊಂಡರೆ, ಭಾರತದಲ್ಲಿ ವಸ್ತು ಭೋಗಕ್ಕಿಂತ ಭಾವಭೋಗಕ್ಕೆ ಒತ್ತು ನೀಡಲಾಗದೆ. ಆದರ್ಶಗಳಿಗೆ ಸಾಂಸ್ಥಿಕ ರೂಪ ನೀಡಿ ಉತ್ಸವಗಳಾಗಿವೆ. ಈ ಉತ್ಸವಗಳಲ್ಲಿ ಸಾರ್ವಜನಿಕ ಸಹಭಾಗಿತ್ವ ಚಿಂತನೆಗಳನ್ನು ಗಟ್ಟಿಗೊಳಿಸುತ್ತವೆ. ಪ್ರಕೃತಿ ಮತ್ತು ಸಂಸ್ಕøತಿಯ ಪೋಷಣೆ ಮುಖ್ಯವಾಗಬೇಕೇ ಹೊರತು ಶೋಷಣೆಯಲ್ಲ ಎಂದು ಕಟೀಲು ಶ್ರೀ ದುರ್ಗಾ ಸಂಸ್ಕøತ ಪ್ರತಿಷ್ಠಾನದ ಪ್ರಾಚಾರ್ಯ ಡಾ.ಎಂ.ಪದ್ಮನಾಭ ಮರಾಠೆ ಹೇಳಿದರು.
ಸಂಜೆ ಮೂಡುಬಿದಿರೆ ಸಮಾಜ ಮಂದಿರ ಸಭಾದ ವತಿಯಿಂದ ಜರಗಿದ 73ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕøತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಉತ್ಸವಗಳು ಸಾಂಕೇತಿಕತೆ ಮತ್ತು ಸಾರ್ಥಕತೆ ಕುರಿತು ರವಿವಾರ ಅವರು ಉಪನ್ಯಾಸ ನೀಡಿದರು.
ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವನ್ನು ಉಪಾಧ್ಯಕ್ಷ ಸಂಪತ್. ಡಿ.ಸಾಮ್ರಾಜ್ಯ ಸ್ವಾಗತಿಸಿದರು. ಜತೆ ಕಾರ್ಯದರ್ಶಿ, ದಸರಾ ಉತ್ಸವ ಸಂಚಾಲಕ ಎಂ.ಗಣೇಶ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಎಸ್.ಎನ್.ಎಂ. ಪಾಲಿಟೆಕ್ನಿಕ್‍ನ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ವೈವಿಧ್ಯ ಜರಗಿತು.

