ಬಂಟ್ವಾಳ: ಇಲ್ಲಿನ ಕೊಯಿಲ ಗ್ರಾಮದ ಗೋವಿಂದಬೆಟ್ಟ ಶ್ರೀ ಶಕ್ತಿತ್ರಯ ಸ್ವರೂಪಿಣಿ ಮಹಾದೇವಿ ದೇವಸ್ಥಾನದಲ್ಲಿ ಅ. 18ರಂದು ವಾರ್ಷಿಕ ನವರಾತ್ರಿ ಪೂಜಾ ಮಹೋತ್ಸವ ನಡೆಯಲಿದೆ.
ಅದೇ ದಿನ ಬೆಳಿಗ್ಗೆ 8ಗಂಟೆಯಿಂದ ಗಣಹೋಮ, ನಾಗಸುಬ್ರಹ್ಮಣ್ಯ ದೇವರಿಗೆ ತಂಬಿಲ, ಕ್ಷೀರಾಭಿಷೇಕ, ಮಧ್ಯಾಹ್ನ 12ಗಂಟೆಗೆ ಶ್ರೀದೇವಿಗೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 7ಗಂಟೆಗೆ ಭಜನೆ, ರಾತ್ರಿ 9ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಕಲ್ಲುರ್ಟಿ ದೈವಕ್ಕೆ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *