ಕುಪ್ಪೆಪದವು: ಗುರುಪುರ ಕೈಕಂಬ ಸಮೀಪದ ಸೂರಲ್ಪಾಡಿ ಮಸೀದಿ ಬಳಿ ಹಾದುಹೋಗಿರುವ ರಾ.ಹೆ. 169 ರ ಬದಿಯಲ್ಲಿ ದೊಡ್ಡದೊಂದು ಗುಂಡಿ ಮೂಡಿದ್ದು, ಸದ್ಯಕ್ಕೆ ಯುವಕರ ಸಹಕಾರದಿಂದ ತಾತ್ಕಾಲಿಕ ಬೇಲಿ ಹಾಕಲಾಗಿದೆ. ಈ ಭಾಗದಲ್ಲಿ ರಸ್ತೆ ಕುಸಿಯುವ ಭೀತಿ ವ್ಯಕ್ತವಾಗಿದ್ದು, ಹೆದ್ದಾರಿ ಇಲಾಖೆ ತಕ್ಷಣ ಸ್ಪಂದಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

beli
ಈ ಬಾರಿಯ ಮಳೆಯಿಂದಾಗಿ ಮಸೀದಿ ಸಮೀಪದಲ್ಲಿ ರಸ್ತೆಯ ಬದಿಯ ಮೋರಿಯಲ್ಲಿ ಕುಸಿತ ಉಂಟಾಗಿತ್ತು. ಆದರೆ ಇಲ್ಲಿ ಎತ್ತರವಾಗಿ ಹುಲ್ಲು ಬೆಳೆದಿರುವುದರಿಂದ ಗುಂಡಿ ಗೋಚರಿಸುತ್ತಿರಲಿಲ್ಲ. ಇದನ್ನು ಗಮನಿಸಿದ ಸ್ಥಳೀಯ ಯುವಕರು ಗಂಜಿಮಠ ಪಂಚಾಯತ್ ಉಪಾಧ್ಯಕ್ಷ ಝಾಕಿರ್ ಆರ್. ಎಸ್. ನೇತೃತ್ವದಲ್ಲಿ ತಾತ್ಕಾಲಿಕ ಬೇಲಿ ಅಳವಡಿಸಿದ್ದಾರೆ.

beli (1)
ಈ ಬಗ್ಗೆ ಮಾತಾಡಿದ ಝಾಕಿರ್ ಅವರು, ಸದ್ಯಕ್ಕೆ ತಾತ್ಕಾಲಿಕ ಬೇಲಿ ಹಾಕಲಾಗಿದ್ದು, ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಗಮನಿಸಿ, ಸ್ಥಳಕ್ಕೆ ಧಾವಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

By Suddi9

Leave a Reply

Your email address will not be published. Required fields are marked *