ಮೂಡುಬಿದಿರೆ: ಶ್ರೀಯಕ್ಷ ದೇವ ಮಿತ್ರ ಕಲಾ ಮಂಡಳಿ(ರಿ) “ಯಕ್ಷ ಉಚ್ಚಯ” ಕಾರ್ಯಕ್ರಮವು ಅ.5ರಂದು ಮೂಡುಬಿದಿರೆ ಪದ್ಮಾವತಿ ಕಲಾ ಮಂದಿರದಲ್ಲಿ ತುಳು ಅಕಾಡಮಿ ಅಧ್ಯಕ್ಷರಾದ ಎ. ಸಿ.ಭಂಡಾರಿಯವರು ಉದ್ಘಾಟನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಡಾ.ಕೆ ಚಿನ್ನಪ್ಪ ಗೌಡ ಅಧ್ಯಕ್ಷತೆ ಸ್ಥಾನ ವಹಿಸಿದ್ದರು.

ಕಟೀಲು ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ ಅಶಿರ್ವಾಚನಗೈದರು. ಈ ಸಂದರ್ಭ ‘ವಿಂಶತಿ ವಿಭವ’ ಪುಸ್ತಕ ಬಿಡುಗಡೆ ಮಾಡಿದವರು..ಪಾವಂಜೆ ಶಶೀಂದ್ರ ರಾವ್. ಯಕ್ಷಗಾನ ಅರ್ಥ ಸಹಿತ ‘ಶ್ರೀ ದೇವೀ ಮಹಾತ್ಮ್ಯಂ’ ಪ್ರಸಂಗವನ್ನು ಬಲಿಪ ನಾರಾಯಣ ಭಾಗವತರು ಬಿಡುಗಡೆ ಗೊಳಿಸಿದರು.
ಸಭೆಯಲ್ಲಿ ಶಾಸಕ ಉಮಾನಾಥ ಕೊಟ್ಯಾನ್,ಜಪ್ಪು ಯೋಗಿಶ್ ಶೆಟ್ಟಿ ಉಪಸ್ಥಿತರಿದ್ದರು.

ಸಂಸ್ಥೆಯ ಸ್ಥಾಪಕಾಧ್ಯಕ್ಷ ಎಮ್.ದೇವಾನಂದ್ ಭಟ್ ಸ್ವಾಗಸಿದರು. ಗೌರಾವಧ್ಯಕ್ಷ ಶ್ರೀ ಪತಿ ಭಟ್ ಪ್ರಾಸ್ತಾವಿಕ ಭಾಷಣ ಮಾಡಿದವರು, ಯೋಗಿಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ಮಹಾವೀರ ಪಾಂಡಿಯವರು ವಂದಿಸಿದರು.
ಬಳಿಕ “ಅಬ್ಬರದ ಬಬ್ಬರ್ಯೆ” ….”ಮಾಯಕದ ಬನ್ನೆದಿ” ತುಳು ಯಕ್ಷಗಾನ ಜರಗಿತು
