ಬಂಟ್ವಾಳ: ಪಾಣೆಮಂಗಳೂರು ಸಮೀಪದ ಗೂಡಿನಬಳಿ ನಿವಾಸಿ ಮುಹಮ್ಮದ್ ಶಾರೂಕ್ ಅವರು ಬೆಂಗಳೂರಿನಲ್ಲಿ ಈಚೆಗೆ ನಡೆದ ರಾಜ್ಯ ಮಟ್ಟದ 76 ಕೆಜಿ ಒಳಗಿನ ಓಪನ್ ಟ್ವೆಕಾಂಡೋ ಚಾಂಪಿಯನ್ಶಿಪ್ ‘ಜೋಸ್ವಾ ಕಪ್’ ನ ಫೈಟಿಂಗ್ ವಿಭಾಗದಲ್ಲಿ ಚಿನ್ನ ಮತ್ತು ಪುಂಸೆ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಇವರು ಸ್ಥಳೀಯ ನಿವಾಸಿ ಇಸಾಕ್ ಮತ್ತು ಮಮ್ತಾಜ್ ದಂಪತಿ ಪುತ್ರನಾಗಿದ್ದು, ಮಂಗಳೂರು-ಇನೋಳಿ ಬ್ಯಾರೀಸ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಅಂತಿಮ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಯಾಗಿದ್ದಾರೆ.

