ಕಡಂಬು: ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಪ್ರದೀಪ ಗೌಡ ಇವರ ಅಧ್ಯಕ್ಷತೆಯಲ್ಲಿ ಸಂಘದ ಆವರಣದಲ್ಲಿ ನಡೆಯಿತು. ಈ ವರ್ಷ ಸಂಘದ ಸದಸ್ಯರಿಗೆ ನೀಡ ಬೇಕಾದ ಡಿವಿಡೆಂಡ್ ಹಣವನ್ನು ಕೊಡಗು ಸಂತ್ರಸ್ಥರ ಪರಿಹಾರ ನಿಧಿಗೆ ನೀಡುವುದಾಗಿ ತೀರ್ಮಾನಿಸಲಾಯಿತು.SHV_6632

ಶೆಕಡಾ 20 ಡಿವಿಡೆಂಡ್‍ನೊಂದಿಗೆ ಇತರ ನಿಧಿಯಿಂದ ಒಟ್ಟು 10,000 ರೂಪಾಯಿ ಪರಿಹಾರ ನಿಧಿಗೆ ನೀಡುವುದೆಂದು ತೀರ್ಮಾನಿಸಲಾಯಿತು. ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಲ್ಲಿ ಪ್ರಥಮ ತೇಜಶ್ರೀ ಬಿ, ದ್ವಿತೀಯ ಪ್ರದೀಪ ಹಾಗೂ ಹಾಲು ಹಾಕಿದ ಎಲ್ಲಾ ಸದಸ್ಯರಿಗೆ ಹಾಲಿನ ಪ್ರಮಾಣಕ್ಕೆ ಅನುಸಾರವಾಗಿ ಬಹುಮಾನ ನೀಡಲಾಯಿತು.
ದ ಕ ಹಾಲು ಒಕ್ಕೂಟ ಮಂಗಳೂರು ಇದರ ವಿಸ್ತರಣಾಧಿಕಾರಿ ಪ್ರತಿಭಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಿರ್ಧೇಶಕರುಗಳಾದ ಪುಷ್ಪಾ, ವೆಂಕಪ್ಪ ಮೂಲ್ಯ, ಬೆನಡಿಕ್ಟ್ ಪಿಂಟೋ, ಭಾಸ್ಕರ ಕೊಟ್ಟಾರಿ, ಲಿಂಗು ಬಿ, ಪಾರ್ವತಿ ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ರಾಘವ ಬಿ ಸ್ವಾಗತಿಸಿ, ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ಆಲ್ಬರ್ಟ್ ಲಸ್ರಾದೊ ವಂದಿಸಿದರು.

By Suddi9

Leave a Reply

Your email address will not be published. Required fields are marked *