ಕೈಕಂಬ:ಗುರುಪುರ ಕೈಕಂಬದ ಶ್ರೀ ಗಣೇಶ ಕಟ್ಟೆಯಲ್ಲಿ ಆಯೋಜಿಸಲಾಗುವ ವಾರ್ಷಿಕ ಸಾರ್ವಜನಿಕ ಗಣೇಶೋತ್ಸವ ಹಬ್ಬದ ನಿಮಿತ್ತ ಉತ್ಸವ ಸಂಘಟನೆಯವರು ಕಡ್ಡಾಯವಾಗಿ ಅನುಸರಿಸಬೇಕಾದ ಮಹತ್ವದ ನಿಯಮಗಳ ಬಗ್ಗೆ ಗಣೇಶೋತ್ಸವ ಸಂಘಟಕರಿಗೆ ಬಜ್ಪೆ ಪೊಲೀಸ್ ನಿರೀಕ್ಷಕ ಪರಶಿವಮೂರ್ತಿ ಮನವರಿಕೆ ಮಾಡಿದರು.
ಗುರುಪುರ ಕೈಕಂಬದ ಮೆಗಾ ಪ್ಲಾಜಾದಲ್ಲಿ ಭಾನುವಾರ ಆಯೋಜಿಸಲಾದ ಪೊಲೀಸ್ `ಮುನ್ನೆಚ್ಚರಿಕಾ ಸಭೆ’ಯಲ್ಲಿ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಠಾಣಾಧಿಕಾರಿ, ಗೌರಿ ಗಣೇಶ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ಮುಂಚಿತವಾಗಿ ಠಾಣೆಗೆ ಮಾಹಿತಿ ನೀಡಬೇಕು. ಧ್ವನಿ ವರ್ಧಕ, ಮೆರವಣಿಗೆ ಪೊಲೀಸ್ ಅನುಮತಿ ಪಡೆಯತಕ್ಕದ್ದು. ವಿಗ್ರಹ ಪ್ರತಿಷ್ಠಾಪನೆ ಸ್ಥಳ, ಬ್ಯಾನರ್/ಬಂಟಿಗ್ಸ್ ಅಳವಡಿಕೆಗೆ ಕಡ್ಡಾಯವಾಗಿ ಸ್ಥಳೀಯಾಡಳಿತಗಳಿಂದ ಪರವಾನಿಗೆ ಪಡೆಯಬೇಕು. ಸಮಿತಿ ಸದಸ್ಯರಿಗೆ ಸಮವಸ್ತ್ರ, ಬ್ಯಾಜ್ಡ್ ವ್ಯವಸ್ಥೆ ಮಾಡಬೇಕು ಮತ್ತು ಅವರೆಲ್ಲರ ಮಾಹಿತಿ ಠಾಣೆಗೆ ನೀಡತಕ್ಕದ್ದು ಎಂದರು.

11vp ganeshosthava sabe-
ಪೆಂಡಾಲುಗಳಿಗೆ ಸೀಸಿಟೀವಿ ಕ್ಯಾಮರಾ ಅಳವಡಿಸಬೇಕು. ಗಣೇಶೋತ್ಸವ ಸ್ಥಳದಲ್ಲಿ ಮುಂಜಾಗೃತಾ ಕ್ರಮವಾಗಿ ಮರಳು, ನೀರು ಹಾಗೂ ಅಗ್ನಿಶಾಮಕ ಉಪಕರಣ ಇಟ್ಟುಕೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಧ್ವನಿವರ್ಧಕ ಬಳಸಕೂಡದು. ವಿದ್ಯುತ್ ಬಳಕೆಯಲ್ಲಿ ಎಚ್ಚರವಿರಲಿ. ಗಣೇಶ ವಿಸರ್ಜನೆ ಸಂದರ್ಭ ನುರಿತ ಈಜುಗಾರರ ಬಳಸಿಕೊಳ್ಳಿ. ಪೂರ್ವದಲ್ಲಿ ನಿರ್ಧರಿಸಿದ ಮಾರ್ಗದಲ್ಲೇ ಮೆರವಣಿಗೆ ಸಾಗಬೇಕು. ಮೆರವಣಿಗೆ ದಾರಿ ಬದಲಿಸುವಂತಿಲ್ಲ ಎಂದು ಪರಶಿವಮೂರ್ತಿ ವಿವರಿಸಿದರು.11vp ganeshosthava sabe
ಕಡ್ಡಾಯ ನಿರ್ಬಂಧ:
ರಸ್ತೆ, ಫುಟ್ಪಾತ್ ತಡೆಯಾಗುವಂತೆ ಪೆಂಡಾಲ್ ಸ್ಥಾಪಿಸಬಾರದು. ಸಾರ್ವಜನಿಕ ಸ್ಥಳ, ಕಟ್ಟಡಗಳಲ್ಲಿ ಬ್ಯಾನರ್/ಬಂಟಿಂಗ್ಸ್ ಅಳವಡಿಸಬಾರದು. ಬ್ಯಾನರ್/ಬಂಟಿಗ್ಸ್ ಅಳವಡಿಸುವುದಿದ್ದರೆ ಆರ್‍ಟಿಒ ಅನುಮತಿ ಪಡೆಯಬೇಕು. ಸಾರ್ವಜನಿಕರಿಂದ ಬಲವಂತ ಚಂದಾ ವಸೂಲಿ ಮಾಡಬಾರದು. ಸುಪ್ರೀಂ ಕೋರ್ಟಿನ ಆದೇಶದಂತೆ ಮೆರವಣಿಗೆ, ಸಾಂಸಖೃತಿಕ ಕಾರ್ಯಕ್ರಮದ ವೇಳೆ ನಿಷೇಧಕ್ಕೆ ಒಳಪಟ್ಟಿರುವ ಡೀಜೆ ಸೌಂಡ್ ಸಿಸ್ಟಂ(ಡಿಸ್ಕ್ ಜಾಕಿ) ಬಳಸಕೂಡದು. ಪಟಾಕಿ ಸಿಡಿಸುವಾಗ ಮತ್ತು ಧ್ವನಿ ವರ್ಧಕ ಬಳಸುವಾಗ ಅನ್ಯ ಧರ್ಮೀಯರಿಗೆ ತೊಂದರೆಯಾಗಕೂಡದು. ವಿಗ್ರಹ ವಿಸರ್ಜನೆ ವೇಳೆ ಸಾರಿಗೆ ಸಂಚಾರಕ್ಕೆ ತೊಂದರೆಯಾಗದಂತೆ ಸಮಿತಿ ಎಚ್ಚರ ವಹಿಸಬೇಕು. ವಿದ್ಯುತ್ ಕಂಬಗಳಿಂದ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಬಾರದು. ಈ ನಿಮಯ ಉಲ್ಲಂಘಿಸಿದವರ ವಿರುದ್ಧ ಕಾನೂನಿನಂತೆ ಕ್ರಮ ಜರುಗಿಸಲಾಗುವುದು ಎಂದವರು ಸ್ಪಷ್ಟಪಡಿಸಿದರು. ವೇದಿಕೆಯಲ್ಲಿ ಬಜ್ಪೆ ಠಾಣೆಯ ಎಸ್‍ಐ ಶಂಕರ್ ನಾಯರ್ ಇದ್ದರು.
ಸಭೆಯಲ್ಲಿ ಕೈಕಂಬ ಸಾರ್ವಜನಿಕರ ಗಣೇಶೋತ್ಸವಕ್ಕೆ ಸಂಬಂಧಿಸಿದ ಕುಪ್ಪೆಪದವು, ಎಡಪದವು, ಕೊಂಪದವು, ನೀರುಡೆ, ಕೈಕಂಬ ಮತ್ತು ಅಡ್ಡೂರು ಸಮಿತಿಗಳ ಪದಾಧಿಕಾರಿಗಳಾದ ವಿನೋದ ಮಾಡ, ಶ್ರೀಧರ ರಾವ್, ಗಣೇಶ ಆಚಾರ್ಯ, ಚಂದ್ರಹಾಸ ಶೆಟ್ಟಿ, ಗಂಜಿಮಠ ಗ್ರಾಪಂ ಉಪಾಧ್ಯಕ್ಷ ಜಾಕಿರ್, ಬಾಷಾ ಮಾಸ್ಟರ್, ಹರೀಶ ಮಟ್ಟಿ, ವಸಂತ ಸುವರ್ಣ, ಅಬ್ದುಲ್ ರಜಾಕ್ ಮೊದಲಾದವರಿದ್ದರು.

 

By Suddi9

Leave a Reply

Your email address will not be published. Required fields are marked *