ಕೈಕಂಬ: ಮಂಗಳೂರು ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಉಬ್ಬುಗಳಿಗೆ ಬಂಗ್ಲೆಗುಡ್ಡೆ ಹೆಲ್ಪ್ ಗೈಸ್‍ನ ಯುವಕರು ಬಣ್ಣ ಬಳಿಯುವ ಮೂಲಕ ಪ್ರಸಂಶೆಗೆ ಕಾರಣರಾಗಿದ್ದಾರೆ. ಸೋಮವಾರ ಭಾರತ ಬಂದ್ ಸಂದರ್ಭದಲ್ಲಿ ವಾಹನ ಸಂಚಾರ ಕಡಿಮೆ ಇದ್ದ ಸಂದರ್ಭದಲ್ಲಿ ಬಣ್ಣ ಬಳಿಯುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.IMG-20180910-WA0006

ಹೆಲ್ಪ್‍ಗೈಸ್ ಗುರುಪುರ ದ್ವಾರದ ಬಳಿಯಲ್ಲಿ ಅಪಘಾತಗಳನ್ನು ನಿಯಂತ್ರಸಲು ಹೆದ್ದಾರಿ ಇಲಾಖೆಯವರು ಉಬ್ಬುಗಳನ್ನು ನಿರ್ಮಿಸಿದ್ದು ಬಣ್ಣಬಳಿಯದೆ ವಾಹನ ಸವಾರರಿಗೆ ಗೋಚರಕ್ಕೆ ಬರದೇ ಅಪಘಾತ ಸಂಭವಿಸುತ್ತಿತು. ಇದನ್ನು ಮನಗಂಡ ತಂಡವು ಉಬ್ಬುಗಳಿಗೆ ಬಣ್ಣ ಬಳಿದು ಬಜಪೆ ಪೊಲೀಸರ ಮತ್ತು ಸಾರ್ವಜನಿಕರ ಕೃತಜ್ಞತೆಗೆ ಪಾತ್ರರಾಗಿದ್ದಾರೆ. ದೀಪಕ್ ಕೋಟ್ಯಾನ್ ಮತ್ತು ಹೆಲ್ಪ್‍ಗೈಸ್ನ ಸದಸ್ಯರಾದ ಹಸನ್ ಬಾವಾ , ಹಮೀದ್ ಬಂಗ್ಲೆಗುಡ್ಡೆ,ಇಜಾದ್ , ದಾವೂದ್, ಜಿ. ಮೊಹಮ್ಮದ್ ಉಂಞ, ನಝೀರ್ , ಮಯ್ಯೆದಿ ಮೊದಲಾದವರಿದ್ದರು.

 

By Suddi9

Leave a Reply

Your email address will not be published. Required fields are marked *