ಕೈಕಂಬ: ಶೋರಿನ್ ಕರಾಟೆ ಅಸೋಸಿಯೇಷನ್ ಮೂಡಬಿದಿದರೆ ಇದರ ಆಶ್ರಯದಲ್ಲಿ ಗಂಜಿ ಮಠದ ವಂಡೆಲಾ ಹಾಲ್‍ನಲ್ಲಿ ನಡೆದ 16ನೇ ರಾಜ್ಯಮಟ್ಟದ ಕರಾಟೆ ಓಪನ್ ಚಾಂಪಿಯನ್‍ಶಿಪ್‍ನಲ್ಲಿ ಪೊಳಲಿ ರಾಮಕೃಷ್ಣ ತಪೋವನದ ಬಾಲಕಾಶ್ರಮದ ವಿದ್ಯಾರ್ಥಿಗಳು ಚಿನ್ನದ ಪದಕ ಗಳಿಸಿದ್ದಾರೆ.
ಬೆನೆಜರ್ – ಚಿನ್ನ, ಮಹಾನ್ ಮತ್ತು ಡೆಮೋನ್ಲ್ಯಾಂಗ- ಬೆಳ್ಳಿ, ಹಾಗೂ ತ್ರಿಶೂಲ್, ಸೆಮಿಯೋನ್, ಪ್ರೀತಿಕ, ತನ್ಮಯ, ಯೋಲಂಕಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಇವರು ಶ್ರೀ ರಾಮಕೃಷ್ಣ ತಪೋವನದಲ್ಲಿ ಕರಾಟೆ ಗುರುಗಳಾದ ರಾಜೇಶ್ ಹಾಗೂ ವೆನಿಲ್ಲಾ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ತಪೋವನದ ಅಧ್ಯಕ್ಷರಾದ ಸ್ವಾಮೀ ವಿವೇಕ ಚೈತನ್ಯಾನಂದಜೀ ಅಂಭಿನಂದಿಸಿದ್ದಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕರಾಟೆ ಶಿಕ್ಷಣವನ್ನು ನೀಡಲಾಗುತ್ತಿದೆ.
