ಮೂಡುಬಿದಿರೆ: ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನ ಇಂಟರಾಕ್ಟ್ ಕ್ಲಬ್‍ನ ಆಶ್ರಯದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಂಗಳೂರಿನ ವೆನ್‍ಲಾಕ್ ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ,ಸದಾನಂದ ಪೂಜಾರಿ’ಕಿಡ್ನಿ ಮತ್ತು ಆರೋಗ್ಯ’ ಎಂಬ ವಿಷಯದ ಕುರಿತು ಮಾಹಿತಿ ನೀಡಿದರು.
ರೋಟರಿ ಕ್ಲಬ್ ಟೆಂಪಲ್ ಟೌನ್ ಆಫ್ ಮೂಡುಬಿದಿರೆ ಅಧ್ಯಕ್ಷ ವಿನ್ಸೆಂಟ್ ಡಿಕೋಸ್ತಾ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಬದಲ್ಲಿ ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪೆÇ್ರ. ರಮೇಶ್ ಭಟ್, ರೋಟರಿ ಕ್ಲಬ್‍ನ ಕಾರ್ಯದರ್ಶಿ ಡೆನಿಸ್ ಪಿರೇರಾ, ಇಂಟರಾಕ್ಟ್ ಕ್ಲಬ್‍ನ ಉಸ್ತುವಾರಿಗಳಾದ ರಾಜೇಶ್ ಬಂಗೇರ, ಹರೀಶ್ ಮತ್ತು ಕಾಲೇಜಿನ ಇಂಟರಾಕ್ಟ್ ಕ್ಲಬ್‍ನ ಅಧ್ಯಾಪಕ ಸಂಯೋಜಕಿ ವಿಜಯಲಕ್ಷ್ಮಿ ಮಾರ್ಲ ಉಪಸ್ಥಿತರಿದ್ದರು.
ಇಂಟರಾಕ್ಟ್ ಕ್ಲಬ್‍ನ ಅಧ್ಯಕ್ಷೆ ಗೌರವಿ ಪೈ ಸ್ವಾಗತಿಸಿದರು. ರಕ್ಷಣ್ಯಾ ಶೆಟ್ಟಿ ಅತಿಥಿ ಪರಿಚಯ ಮಾಡಿದರು. ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಕಾವ್ಯಾ ವಂದಿಸಿದರು.

By Suddi9

Leave a Reply

Your email address will not be published. Required fields are marked *