ಮೂಡುಬಿದಿರೆ: 2018-19 ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಟ್ಟದ ಲಲಿತಕಲಾ ಸ್ಫರ್ಧೆಗಳನ್ನು ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ, ಮಂಗಳಗಂಗೋತ್ರಿ ಇವರ ನಿರ್ದೇಶನದಂತೆ, ಡಾ. ಪಿ. ದಯಾನಂದ ಪೈ – ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿಯಲ್ಲಿ ಆ.13ರಂದು ನಡೆಸಲಾಯಿತು.

alvas bva (1)

ಈ ಸ್ಪರ್ಧೆಯಲ್ಲಿ ಒಟ್ಟು ಏಳು ವಿಭಾಗದ ಸ್ಪರ್ಧೆಯಲ್ಲಿ, ಆರು ವಿಭಾಗಗಳಲ್ಲಿ ಪ್ರಥಮ ಸ್ಥಾನವನ್ನು ಆಳ್ವಾಸ್ ಕಾಲೇಜು ಪಡೆದುಕೊಂಡಿದ್ದು, ಸಮಗ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

alvas bva (2)

ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಫರ್ದೆಯಲ್ಲಿ ಸಾರಂಗ್ ನರನ್ಪನವೆ, ಕೊಲಾಜ್ ನಲ್ಲಿ ಸುಮಂತ್, ಭಿತ್ತಿಚಿತ್ರ ರಚನೆಯಲ್ಲಿ ಕಿರಣ್ ಸಿ. ದೊಡ್ಡಮನಿ, ಆವೆಮಣ್ಣಿನ ಕಲಾಕೃತಿ ರಚನೆಯಲ್ಲಿ ಅಕ್ಷಯ್ ರಾಜ್, ವ್ಯಂಗ್ಯಚಿತ್ರ ರಚನೆಯಲ್ಲಿ ಅಭಿಲಾಶ್ ಹಾಗೂ ರಂಗೋಲಿ ವಿಭಾಗದಲ್ಲಿ ಪ್ರಮೋದನ್ ರವರು ಪ್ರಥಮ ಸ್ಥಾನವನ್ನು ಪಡೆದುಕೊಂಡು ಆಳ್ವಾಸ್ ಕಾಲೇಜುಸಮಗ್ರ ಪ್ರಶಸ್ತಿತನ್ನದಾಗಿಕೊಂಡಿತು.

By Suddi9

Leave a Reply

Your email address will not be published. Required fields are marked *