ಸುಂಕದಕಟ್ಟೆ: ಇಂತಹ ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲಿ ಸಂಘ-ಸಂಸ್ಥೆಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಆ ಮೂಲಕ ಸಮಾಜ ಸೇವೆಗೈಬೇಕು ಎಂದು ಮಂಗಳೂರು `ಸೆಝ್’ ನಿಯಮಿತದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ. ಸೂರ್ಯನಾರಾಯಣ ಹೇಳಿದರು.gur-july-14-sunkadakatte-2

ಸುಂಕದಕಟ್ಟೆ ದೇವಸ್ಥಾನದ ಸಭಾಗೃಹದಲ್ಲಿ ಶನಿವಾರ(ಜುಲೈ 14) ಯುವವಾಹಿನಿ(ರಿ) ಬಜ್ಪೆ ಘಟಕ ಇದರ ಆಶ್ರಯದಲ್ಲಿ ಮಂಗಳೂರು ಸೆಝ್ ನಿಯಮಿತ ಸಹಯೋಗದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ(ಉಡುಪಿ), ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್(ಉಡುಪಿ) ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ(ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು(ಸುಂಕದಕಟ್ಟೆ) ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಣ್ಣಿನ ಉಚಿತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತಾಡಿದರು.gur-july-14-sunkadakatte-1

ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರವಿಚಂದ್ರ ಮಾತನಾಡುತ್ತ, ಯುವವಾಹಿನಿ ನಡೆಸುತ್ತಿರುವ ಈ ಶಿಬಿರದಿಂದ ಹೆಚ್ಚು ಮಂದಿ ಪ್ರಯೋಜನ ಪಡೆಯುವಂತಾಗಲಿ ಮತ್ತು ಶಿಬಿರ ಯಶ್ವಸಿಯಾಗಲಿ ಎಂದು ಹಾರೈಸಿದರು. ಬಜ್ಪೆ ಯುವವಾಹಿನಿ ಘಟಕಾಧ್ಯಕ್ಷ ದೇವರಾಜ ಅಮೀನ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಡಾ. ಸಿಬಿನ್ ಗಿರೀಶ್, ಡಾ. ಪ್ರಿಯಾ, ಸುಂಕದಕಟ್ಟೆ ದೇವಳದ ಆಡಳಿತ ಮೊಕ್ತೇಸರ ನಾರಾಯಣ ಪೂಜಾರಿ, ವಕೀಲ ವಿನೋಧರ ಪೂಜಾರಿ, ದೀಪಕ್ ಕೋಟ್ಯಾನ್, ರಮೇಶ್ ಕೋಟ್ಯಾನ್ ಮೊದಲಾದವರಿದ್ದರು. ಕಾಲೇಜು ಗ್ರಂಥಪಾಲಕ ವಿಶ್ವನಾಥ ಪೂಜಾರಿ ರೆಂಜಾಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರಸಾದ್ ನೇತ್ರಾಲಯದ ನಿರ್ದೇಶಕ ಡಾ. ಕೃಷ್ಣಪ್ರಸಾದ್ ರೋಗಿಗಳ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆಯೊಂದಿಗೆ ಔಷಧೋಪಚಾರ ಸಲಹೆ ನೀಡಿದರು. ಶಿಬಿರದಿಂದ ಸಾಕಷ್ಟು ಮಂದಿ ಪ್ರಯೋಜನ ಪಡೆದರು.

ಶಿಬಿರ ನಡೆಯುತ್ತಲೇ ಡಾ. ಪ್ರಿಯಾ ಅವರು ಕಣ್ಣಿನ ಗ್ಲುಕೋಮಾ ಕಾಯಿಲೆ ಕುರಿತು ಫಲಾನುಭವಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲೆ ಲತಾ ಕೆ. ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *