ಬಂಟ್ವಾಳ: ಬಂಟ್ವಾಳ ತಾಲೂಕು ಸರಪಾಡಿ ಗ್ರಾಮದ ಕಾಯರ್‍ಪಲ್ಕೆ ಹೆಗ್ಡೇಸ್ ಆಂಗ್ಲಮಾಧ್ಯಮ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ 2018-19 ಸಾಲಿನ ಶಾಲಾ ಮಂತ್ರಿಮಂಡಲ ರಚನೆ ಮತ್ತು ಶಾಲಾ ಸಂಚಾಲಕ ಎನ್. ಸುಧಾಕರ ಹೆಗ್ಡೆ ಅವರ 70ರ ಹುಟ್ಟುಹಬ್ಬ ಕಾರ್ಯಕ್ರಮ ಜೂ.13 ರಂದು ಜರಗಿತು.
8ನೇ ತರಗತಿ ವಿದ್ಯಾರ್ಥಿನಿ ಸಮೃದ್ಧಿ ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಕಿರಣ್ ಉಪನಾಯಕನಾಗಿ, ನಿಶ್ಮಿತಾ ಸಭಾಪತಿಯಾಗಿ, ಇಂದುಶ್ರೀ ಕ್ರೀಡಾಮಂತ್ರಿಯಾಗಿ, ಪವನ್ ಸಾಂಸ್ಕøತಿಕ ಮಂತ್ರಿಯಾಗಿ, ಶಂಬ್ರೀನಾ ಸ್ವಚ್ಛತಾ ಮಂತ್ರಿಯಾಗಿ ಆಯ್ಕೆಯಾದರು. ಗೂಡಿನಬಳಿ ಹಯಾತುಲ್ ಇಸ್ಲಾಂ ಅನುದಾನಿತ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕÀ ರಾಮಚಂದ್ರ ರಾವ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಯಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಎನ್.ಎಸ್. ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು. ಗೂಡಿನಬಳಿ ಹಯಾತುಲ್ ಇಸ್ಲಾಂ ಅನುದಾನಿತ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕÀ ರಾಮಚಂದ್ರ ರಾವ್, ಶಾಲಾಭಿವೃದ್ಧಿ ಸಮಿತಿಯ ಆದಿರಾಜ್ ಜೈನ್ ಹಾಗೂ ಮುಖ್ಯ ಶಿಕ್ಷಕಿ ಉಷಾ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ದಿವ್ಯಾ ಸ್ವಾಗತಿಸಿ, ವಂದಿಸಿದರು. ಪ್ರಕಾಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
