ಕಡೇಶಿವಾಲಯ – ಬರಿಮಾರು ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭವುತಾ.19/06/18 ರಂದು ದ.ಕ.ಜಿ.ಪ.ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಡೇಶಿವಾಲಯದಲ್ಲಿ ನಡೆಯಿತು.
ನೂತನ ಶಾಸಕರಾದ ಶ್ರೀ ರಾಜೇಶ್ ನಾೈಕ್ ಉಳಿಪ್ಪಾಡಿ ಯವರು 32 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು. ನಂತರ ಸಭೆಯನ್ನುದ್ದೇಶಿ ಮಾತನಾಡಿದ ಶಾಸಕರು ಸರಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ,ತ್ವರಿತಗತಿಯಲ್ಲಿ ಯೋಜನೆಗಳನ್ನು ಜನರಿಗೆತಲುಪಿಸಬೇಕೆಂದು ಆಧಿಕಾರಿಗಳಿಗೆ ಸೂಚಿಸಿದರು.ನಂತರ ಮಾತನಾಡಿದ ಗೋಳ್ತಮಜಲು ಜಿಲ್ಲಾ ಪಂಚಾಯತ್ ಸದಸ್ಯೆಕಮಲಾಕ್ಷಿ ಕೆ ಪೂಜಾರಿಯವರು ಮುಂದಿನ ದಿನಗಳಲ್ಲಿ ಶಾಸಕರಜೊತೆಗೂಡಿಗ್ರಾಮದ ಸಮಗ್ರಅಭಿವೃದ್ಧಿಗೆ ನೆರವಾಗುದಾಗಿ ಭರವಸೆಯಿತ್ತರು. ನಂತರಅಧ್ಯಕ್ಷೀಯ ಭಾಷಣ ನಡೆಸಿದ ಕಡೇಶಿವಾಲಯ ಗ್ರಾಮ ಪಂಚಾಯತ್ ಸದಸ್ಯೆ ಶ್ಯಾಮಲಾ ಶೆಟ್ಟಿಚಿನ್ನಯಕಟ್ಟೆಯವರುಅಭಿವೃದ್ಧಿ ಕಾರ್ಯಗಳಿಗೆ ವೇಗವನ್ನಿತ್ತ ಶಾಸಕರಿಗೆಗ್ರಾಮಸ್ಥರ ಪರವಾಗಿಅಭಿನಂದನೆಯನ್ನು ಸಲ್ಲಿಸಿದರು.

DSC_0017
ಕಡೇಶಿವಾಲಯ ಗ್ರಾಮಸ್ಥರ ಬಹುಕಾಲದ ಬೇಡಿಕೆಯಾಗಿದ್ದ ಮುಖ್ಯರಸ್ತೆ ದುರಸ್ತಿಯ ವಿಚಾರವಾಗಿತಕ್ಷಣವೇ ಸ್ಪಂದಿಸಿದ ಶಾಸಕರುಆದಷ್ಟು ಬೇಗ ಕೆಲಸವಾರಂಭಿಸಲು ಸಂಭದಪಟ್ಟವರಿಗೆ ಸೂಚಿಸಿದ್ದು ವಿಶೇಷವಾಗಿತ್ತು.
ಈ ಸಂಧರ್ಭ ವೇದಿಕೆಯಲ್ಲಿಗ್ರಾಮ ಪಂಚಾಯತ್‍ಉಪಾಧ್ಯಕ್ಷ ಸುರೇಂದ್ರರಾವ್, ವ್ಯ.ಸೇ.ಸ.ಬ್ಯಾಂಕ್‍ಇದರಅಧ್ಯಕ್ಷರಾದ ವಿದ್ಯಾಧರರೈ ಪೆರ್ಲಾಪು, ಗ್ರಾಮಕರಣಿಕರಾದ ಬಸಪ್ಪ, ಪಂಚಾಯತ್ ಸದಸ್ಯರಾದ ಸನತ್ ಆಳ್ವ, ಸುರೇಶ್ ಪೂಜಾರಿಕನ್ನೊಟ್ಟು, ಸುರೇಶ್ ಬನಾರಿ, ಹರಿಶ್ಚಂದ್ರಕಾಡಬೆಟ್ಟು, ಸರೋಜ, ಸೇಸಮ್ಮ, ಲಲಿತಾ ಮುಂತಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *