ಕೈಕಂಬ : ಗುರುಪುರ ಫಲ್ಗುಣಿ ನದಿ ಸಾಧಾರಣ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದ್ದು, ಆಸುಪಾಸಿನ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಕಾಣಿಸಿಕೊಂಡಿದೆ.
ಬಂಡಸಾಲೆ ಮೂಲಕ ಕಾರಮೊಗರುವಿಗೆ ಸಾಗುವ ಹೊೈಗೆ ಸಾಗಾಟದ ಕಚ್ಚಾ ರಸ್ತೆಯ ಅಲ್ಲಲ್ಲಿ ನೀರು ತುಂಬಿದೆ. ಇದೇ ರಸ್ತೆಯಲ್ಲಿ ಗ್ಯಾಸ್ ಪೈಪ್‍ಲೈನ್ ಅಳವಡಿಸುತ್ತಿರುವ ಗೈಲ್ ಕಂಪೆನಿಯ ಕೆಲವು ಯಂತ್ರಗಳಿದ್ದು, ಅವುಗಳು ಮಣ್ಣಿನೊಳಗೆ ಹೂತು ಹೋಗುವ ಸಂಭವವಿದೆ.
ಗುರುಪುರ ಕುಕ್ಕುದಕಟ್ಟೆ, ಅತ್ತ ಅದ್ಯಪಾಡಿ, ಏತಮೊಗರು, ಕಂದಾವರ ಮೊದಲಾದ ಕಡೆಗಳಲ್ಲಿಪ್ರವಾಹ ಕಾಣಿಸಿಕೊಂಡಿದ್ದು, ಒಂದೆರಡು ಕಾಮಗಾರಿ ಮುಳುಗಡೆಯಾಗಿದೆ. ಕೆಲವು ಮನೆಗಳತ್ತ ಪ್ರವಾಹ ನೀರು ಹರಿದಿದ್ದು, ಆತಂಕ ಸೃಷ್ಟಿಯಾಗಿದೆ.
ಎರಡು ದಿನಗಳಿಂದ ಸುರಿಯುತ್ತಿರುವ ಸತತ ಗಾಳಿ-ಮಳೆಯಿಂದ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ. ಇನ್ನೊಂದು ದಿನ ಮಳೆ ಮುಂದುವರಿದರೆ ಪ್ರವಾಹ ಹೆಚ್ಚಾಗಿ ನದಿ ದಂಡೆಯ ಮನೆಗಳು ಅಪಾಯ ಎದುರಿಸಲಿವೆ.
