ಕೊಳ್ನಾಡು: ಬಿಜೆಪಿ ಗ್ರಾಮ ಪಂಚಾಯತ್ ಸಮಿತಿ ವತಿಯಿಂದ ಅಭಿನಂದನಾ ಸಮಾರಂಭ ಇಲ್ಲಿನ ವಿಜಯಶ್ರೀ ಕಲ್ಯಾಣ ಮಂಟಪದಲ್ಲಿ ಜರಗಿತು.
ಸಮಾರಂಭದಲ್ಲಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ 3,500 ವಿದ್ಯಾರ್ಥಿಗಳ ಊಟ ನಿಲ್ಲಿಸಿದ ದೋಷ, ಹಿರಿಯರಾದ ಜರ್ನಾದನ ಪೂಜಾರಿಯವರನ್ನು ನಿಂದಿಸಿ ಕಣ್ಣಲ್ಲಿ ನೀರು ಭರಿಸಿದ ದೋಷ ಮುಂತಾದ ಕೆಲವು ದೋಷಗಳಿಂದ ಬಂಟ್ವಾಳದಲ್ಲಿ ರಮಾನಾಥ ರೈಯವರಿಗೆ ಸೋಲಾಗಿದೆ ಎಂದು ಟೀಕಿಸಿದರು.
ಈ ವೇಳೆ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರಿಗೆ ಮೈಸೂರು ಪೇಟ ಧರಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ರಾಜೇಶ್ ನಾಯ್ಕ್, ಜನರ ಪ್ರೀತಿ ವಿಶ್ವಾಸವನ್ನು ಉಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಿರಂತರ ಸಂರ್ಪಕದಿಂದ ಕ್ಷೇತ್ರದ ಅಭಿವೃದ್ಧಿಯೊಂದಿಗೆ ನೆಮ್ಮದಿಯ, ಶಾಂತಿ ಹಾಗೂ ಸಮೃದ್ಧಿಯ ಬಂಟ್ವಾಳ ನಿರ್ಮಾಣ ಮಾಡುತ್ತೇನೆ. ಜತೆಗೆ ರಾಜ ಧರ್ಮ ಪಾಲನೆ ನನ್ನ ಆದ್ಯ ಕರ್ತವ್ಯ ಎಂದರು.
ಸಮಾರಂಭದಲ್ಲಿ ವಿವಿಧ ಸಂಸ್ಥೆಗಳಾದ ಶ್ರೀ ಮಾರಿಯಮ್ಮ ಯುವಕ ಸಂಘ ಸೆರ್ಕಳ, ವಿಶ್ವ ಹಿಂದೂ ಪರಿಷತ್ ಭಜರಂಗದಳ, ಹಳೆ ವಿದ್ಯಾರ್ಥಿ ಯುವಕ ಸಂಘ, ಶಿವಾಜಿ ಫ್ರೆಂಡ್ಸ್ ಮಂಕುಡೆ, ವಿನಯಶ್ರೀ ಯುವಕ ಮಂಡಲ ಕುಡ್ತಮುಗೇರು, ವನಬಿಂದು ಫ್ರೆಂಡ್ಸ್ ತಾಳಿತ್ತನೂಜಿ, ಸಹೋದರ ಯುವಕ ಸಂಘ ಬಾರೆಬೆಟ್ಟು, ಗೋಪಾಲಕೃಷ್ಣ ಸೇವಾ ಸಂಘ ಕಟ್ಟತ್ತಿಲು, ಶ್ರೀದೇವಿ ಕಾಡುಮಠಕ್ಕೆ ಗೌರವಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ, ಜಿಲ್ಲಾ ಎಸ್ಸಿ ಮೊರ್ಚಾ ಅಧ್ಯಕ್ಷ ದಿನೇಶ್ ಅಮ್ಟೂರು, ಕ್ಷೇತ್ರದ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಮಹಮ್ಮದ್ ಮುಸ್ತಾಫ, ತಾಲೂಕು ಪಂಚಾಯತ್ ಸದಸ್ಯರಾದ ಕುಲ್ಯಾರು ನಾರಾಯಣ ಶೆಟ್ಟಿ, ಮಾಣಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಅಭಿಷೇಕ್ ರೈ, ವಿಟ್ಲಪಡ್ನೂರು ಪಂಚಾಯತ್ ಅಧ್ಯಕ್ಷ ರವೀಶ್ ಶೆಟ್ಟಿ, ಕ್ಷೇತ್ರದ ಎಸ್ಟಿ ಮೋರ್ಚಾದ ಜಯರಾಮ ಕುಂಟ್ರಕಳ, ತಾಲೂಕು ಯುವ ಮೋರ್ಚಾದ ಲೋಹಿತ್ ಅಗರಿ, ಪಂಚಾಯತ್ ಸದಸ್ಯರ ಹರೀಶ್ ಟೈಲರ್ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ ಸ್ವಾಗತಿಸಿದರು. ಶಶಿಧರ ರೈ, ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವೇಣುಗೋಪಾಲ ವಂದಿಸಿದರು. ಪಂಚಾಯತ್ ಸದಸ್ಯ ಶ್ರೀಮತಿ ರೇಣುಕಾ ಪ್ರಾರ್ಥನೆ ನೆರವೇರಿಸಿದರು.

