bhaskarprasad1-1528272239

ಬೆಂಗಳೂರು: ಅಮೀನ್ ಮಟ್ಟು ವಿವಾದಿತ ಬರಹಗಾರ ರೋಹಿತ್ ಚಕ್ರತೀರ್ಥರ ಹತ್ಯೆ ಮಾಡುವಂತೆ ತನಗೆ ಒತ್ತಡ ತಂದಿದ್ದರು ಎಂದು ಗಂಭೀರ ಆರೋಪ ಮಾಡಿದ್ದ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್.ಭಾಸ್ಕರ್ ಪ್ರಸಾದ್ ಅವರನ್ನು ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ಸಮಯ ಬಂಧಿಸಲು ಬಂದಿದ ಪೊಲೀಸರನ್ನು ವಾಪಸು ಕಳುಹಿಸಿದ್ದ ಭಾಸ್ಕರ್ ರನ್ನು ಬೆಳಿಗ್ಗೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ರಾತ್ರಿ ಸಮಯ 2:10ರಿಂದ ಪೊಲೀಸರು ಭಾಸ್ಕರ್ ಪ್ರಸಾದ್ ಮನೆಯ ಮುಂದೆ ಕಾದಿದ್ದು, ಭಾಸ್ಕರ್ ಪ್ರಸಾದ್ ಅವರಿಗೆ ಕರೆ ಮಾಡಿ ಮನೆಯಿಂದ ಹೊರಬರುವಂತೆ ಹೇಳಿದ್ದಾರೆ. ಆದರೆ ರಾತ್ರಿ ಸಮಯವಾಗಿರುವುದರಿಂದ ಅನುಮಾನಗೊಂಡು ಭಾಸ್ಕರ್ ಪ್ರಸಾದ್ ಮನೆಯಿಂದ ಹೊರ ಬಂದಿರಲಿಲ್ಲ ಎಂದು ಹೇಳಲಾಗಿದೆ. ಇದಲ್ಲದೇ ಬೆಳಗ್ಗೆ ಬನ್ನಿ ಅಥವಾ ನಾನೇ ಪೊಲೀಸ್ ಠಾಣೆಗೆ ಬರುತ್ತೇನೆ ಎಂದು ಕರೆ ಮಾಡಿದ್ದ ಪೊಲೀಸರಿಗೆ ಭಾಸ್ಕರ್ ಪ್ರಸಾದ್ ಹೇಳಿದ್ದು, ಈ ರೀತಿಯಾಗಿ ಅಪರಾತ್ರಿಯಲ್ಲಿ ಬಂದು ತೊಂದರೆ ಕೊಡುವ ಅಗತ್ಯ ಏನಿದೆ ಎಂದು ಭಾಸ್ಕರ್ ಪ್ರಸಾದ್ ತಮ್ಮ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದರು.

ಬಂಧಿಸಿರುವ ಅವರನ್ನು ರಕ್ತದೊತ್ತಡ ಕಡಿಮೆಯಾಗಿರುವ ಕಾರಣ ಆಗಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಮಿನ್ ಮಟ್ಟು ವಿರುದ್ಧ ಕೊಲೆಗೆ ಒತ್ತಡ ಆರೋಪವನ್ನು ಹಾಕಿದ್ದ ಭಾಸ್ಕರ್ ಪ್ರಸಾದ್ ಭಾರೀ ಚರ್ಚೆಗೆ ಕಾರಣವಾಗಿದ್ದರು. ಈ ಸಂಬಂಧ ತನ್ನ ಬಳಿಯಲ್ಲಿ ದಾಖಲೆ ಇದೆ. ಹಿಂದೆ ನಾನು ಮಾರಾಟ ಮಾಡಿದ್ದ ಹಳೆಯ ಫೋನ್ ನಲ್ಲಿ ಅಮಿನ್ ಮಟ್ಟು ತನಗೆ ಮಾಡಿದ ಮೆಸೆಜ್ ಇದ್ದು, ಆ ಫೋನ್ ನನಗೆ ದೊರಕಿದೆ ಎಂದು ಭಾಸ್ಕರ್ ಪ್ರಸಾದ್ ಫೇಸ್ ಬುಕ್ ಲೈವ್ ನಲ್ಲಿ ನಿನ್ನೆ ರಾತ್ರಿ ಹೇಳಿದ್ದರು. ಇದೀಗ ಭಾಸ್ಕರ್ ಬಂಧನ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

By Suddi9

Leave a Reply

Your email address will not be published. Required fields are marked *