ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಆಡಳಿತದಲ್ಲಿ ಯಾವುದೇ ಅನಗತ್ಯ ಖರ್ಚುಗಳನ್ನು ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಕಚೇರಿ ನೀಡಿರುವ ಅಧಿಕೃತ ಸೂಚನೆಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳು, ಕಛೇರಿಗಳು ಮತ್ತು ಏಜೆನ್ಸಿಗಳು ಹೊಸ ಕಾರುಗಳನ್ನು ಖರೀದಿಸಲು ಸಲ್ಲಿಸಿದ ಪ್ರಸ್ತಾಪಗಳನ್ನು ಪರಿಶೀಲಿಸಲು ಅಧಿಕಾರಿಗಳನ್ನು ಕೇಳಿದೆ.ಅದೇ ರೀತಿಯಾಗಿ , ಸರಕಾರದ ಕಚೇರಿಗಳು ಮತ್ತು ಅಧಿಕೃತ ನಿವಾಸಗಳ ಅನಗತ್ಯವಾದ ನವೀಕರಣ ಮಾಡದಂತೆ ಸೂಚಿಸಲಾಗಿದೆ ನಿರ್ದೇಶಿಸಿದ್ದಾರೆ.
ಪ್ರಮುಖ ವಿಷಯಗಳ ವಿಚಾರವಾಗಿ ನಡೆಯುತ್ತಿರುವ ಸಭೆಯಲ್ಲಿ ಅಧಿಕಾರಿಗಳಿಗೆ ಮೊಬೈಲ್ ಪೋನ್ ಗಳನ್ನು ಬಳಸದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಜೂನ್ 1 ರಂದು ಸೂಚಿಸಿದ್ದರು.ಮೇ 23 ರಂದು ಅವರು ಅಧಿಕಾರ ವಹಿಸಿಕೊಂಡ 11 ದಿನಗಳ ನಂತರ ಮುಖ್ಯಮಂತ್ರಿಯ ನಿರ್ಧಾರವು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ನಂತರ ತೆಗೆದುಕೊಳ್ಳಲಾಯಿತು.
ಪ್ರಣಾಳಿಕೆ ಯಲ್ಲಿ ನೀಡಿದ ಭರವಸೆಯಂತೆ ರೈತರ ಸಾಲಮನ್ನಾ ಮಾಡಬೇಕಾದ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲೆ ಇರುವುದರಿಂದ ಹಣಕಾಸು ಶಿಸ್ತನ್ನು ಪಾಲಿಸುವ ನಿಟ್ಟಿನಲ್ಲಿ ಸರ್ಕಾರದ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

