ಬೆಂಗಳೂರು: ಕಾಂಗ್ರೆಸ್ ಶಾಸಕರಿರುವ ರಿಸಾರ್ಟಿನಲ್ಲಿ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ ಮುಂಜಾನೆಯಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಇನ್ನು ಪ್ರತಾಪ್ಗೌಡರನ್ನು ಬಿಜೆಪಿ ಮುಖಂಡರು ಹೈಜಾಕ್ ಮಾಡಿದ ವದಂತಿ ಹಬ್ಬಿದ್ದು, ಯಾರ ದೂರವಾಣಿ ಸಂಪರ್ಕಕ್ಕೂ ಪ್ರತಾಪ್ ಗೌಡ ಅವರು ಸಿಗುತ್ತಿಲ್ಲ. ಇದಲ್ಲದೇ ಕೆಲವರ ಪ್ರಕಾರ ಅನಾರೋಗ್ಯದ ನೆಪ ಹೇಳಿ ಆಸ್ಪತ್ರೆಯಲ್ಲಿದ್ದಾರೆಂದು ಹೇಳಲಾಗಿದೆ.

